ಹಾಸನ: ಪುಂಡಾನೆ ಸೆರೆ ಸ್ಥಳಾಂತರ ಹಾಗೂ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ವೇಳೆ ಒಂದಲ್ಲ, 8 ಬಾರಿ ಯಶಸ್ವಿಯಾಗಿ ಮೈಸೂರು ದಸರಾ ವೇಳೆ ಚಿನ್ನದ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದ ಕ್ಯಾಪ್ಟನ್ ಅರ್ಜುನ ಆನೆ ದುರಂತ ಸಾವಿಗೀಡಾಗಿದೆ. ಕಾರ್ಯಾಚರಣೆ ವೇಳೆ ಕಾಡಾನೆ ಮತ್ತು ಅರ್ಜುನನ ನಡುವೆ ನಡೆದ ಕಾಳಗದಲ್ಲಿ ಎರಬದಿಯ ಕಿಬ್ಬೊಟ್ಟೆ ಭಾಗಕ್ಕೆ ಬಲವಾಗಿ ಕೋರೆ ಇರಿತದ ಪೆಟ್ಟು ಬಿದ್ದು, 63 ವರ್ಷದ ಪಳಗಿದ ಆನೆ ಶಾಶ್ವತವಾಗಿ ನೆಲಕ್ಕುಳಿದಿದೆ.
Benefits Of Moringa Leaves: ನುಗ್ಗೆಕಾಯಿ ಮಾತ್ರವಲ್ಲ, ಸೊಪ್ಪಿನಲ್ಲೂ ಸಾಕಷ್ಟು ಔಷಧೀಯ ಗುಣಗಳು ಅಡಗಿವೆ..!
ತಾಲೂಕಿನ ಯಸಳೂರು ವಲಯದ ಬಾಳೆಕೆರೆ ಫಾರೆಸ್ಟ್ನಲ್ಲಿ ಎಂದಿನಂತೆ ಕಾರ್ಯಾಚರಣೆ ಆರಂಭವಾಗಿತ್ತು. ಅರ್ಜುನ ಸೇರಿ ನಾಲ್ಕು ಪಳಗಿದ ಆನೆ ಭಾಗಿಯಾಗಿದ್ದವು. ಪುಂಡಾನೆಗೆ ಅರವಳಿಕೆ ಚುಚ್ಚು ಮದ್ದು ನೀಡುವಾಗ ಏಕಾಏಕಿ ಅರ್ಜುನನ ಮೇಲೆ ಅಟ್ಯಾಕ್ ಮಾಡಿದೆ. ಒಂಟಿ ಸಲಗ ದಾಳಿ ಮಾಡುತ್ತಿದ್ದಂತೆಯೇ ಉಳಿದ ಮೂರು ಪಳಗಿದ ಆನೆ ದಿಢೀರ್ ಹಿಮ್ಮೆಟ್ಟಿದವು. ಆದರೆ ಅರ್ಜುನ ಕಾಳಕ್ಕಿಳಿಯಿತು.
ಈ ಸಂದರ್ಭದಲ್ಲಿ ಮರಣ ಹೊಂದಿತು. ಅರ್ಜುನ ಮೇಲೇರಿದ್ದ ಮಾವುತರು ಇಳಿದು ಜೀವ ಉಳಿಸಿಕೊಂಡಿದ್ದಾರೆ. ಮೈಸೂರು ದಸರೆಯಲ್ಲಿ 8 ಅಂಬಾರಿ ಹೊತ್ತು (2012-19) ಜನಮನಗೆದ್ದಿದ್ದ ಅರ್ಜುನ, ಎಲ್ಲಾ ರೀತಿಯಲ್ಲೂ ಜನರ ಪ್ರೀತಿಗೆ ಪಾತ್ರನಾಗಿದ್ದ ಕ್ಯಾಪ್ಟನ್ ಸಾವಿಗೆ ಮಾವುತರು ಕಣ್ಣೀರು ಹಾಕಿದರು. ಅರ್ಜುನನ ಕಳೇಬರ ತಬ್ಬಿಕೊಂಡು ಮಾವುತರು ಗಳಗಳನೆ ಅತ್ತರು.
ಕಾರ್ಯಾಚರಣೆ ಸ್ಥಗಿತ:
ಕಾಡಾನೆ ಕಾರ್ಯಾಚರಣೆ ವೇಳೆ ಕ್ಯಾಪ್ಟನ್ ಅರ್ಜುನ ಸಾವನ್ನಪ್ಪಿರುವ ಹಿನ್ನೆಲೆ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಅರ್ಜುನನಿಗೆ ತಿವಿದು ಪ್ರಾಣ ಬಿಟ್ಟರೂ ಕೂಡಾ ಹಂತಕ ಆನೆ ಮಾತ್ರ ಬಹಳ ಹೊತ್ತಿನವರೆಗೂ ಅಲ್ಲೇ ಇತ್ತು. ಈ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿ ಇವೆಲ್ಲವನ್ನೂ ದೂರದಲ್ಲೇ ನಿಂತು ನೋಡಬೇಕಾಯಿತು.