ಅನೇಕರು ರೇಶನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದು ಇನ್ನೂ ರೇಶನ್ ಕಾರ್ಡ್ ಬಂದಿಲ್ಲ ಎಂದು ಕಾಯುತ್ತಾ ಇರುವವರಿಗೆ ಇಲ್ಲಿ ಒಂದು ಮಹತ್ವದ ಸುದ್ದಿಯನ್ನು ನಾವು ಇಂದು ನಿಮಗೆ ನೀಡಲಿದ್ದೇವೆ.
ಹೊಸ ರೇಶನ್ ಕಾರ್ಡ್ ಗಾಗಿ ಕಾಯುತ್ತಾ ಇರುವವರಿಗೆ ಇಲ್ಲೊಂದು ಶುಭ ಸುದ್ದಿ ನೀಡಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಈಗಾಗಲೇ ಅರ್ಜಿ ಸಲ್ಲಿಸಿದವರ ರೇಶನ್ ಕಾರ್ಡ್ ವಿತರಣೆ ಮಾಡುವ ಜೊತೆಗೆ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಜೂನ್ ಮೊದಲ ವಾರದಲ್ಲಿಯೇ ಅವಕಾಶ ನೀಡಲಾಗುತ್ತಿದೆ. ಹಾಗಾಗಿ ರೇಶನ್ ಕಾರ್ಡ್ ನಲ್ಲಿ ಹೆಸರು ಇಲ್ಲ ಹಾಗೂ ದಾಖಲಾತಿ ತಪ್ಪಾಗಿ ನಮೋದಿಸಲಾಗಿದೆ ಎನ್ನುವವರು ತಪ್ಪದೇ ಈ ಅವಕಾಶ ಬಳಸಿಕೊಂಡು ಶೀಘ್ರ ಹೊಸ ರೇಶನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿ.
ಹೊಸದಾಗಿ ರೇಶನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವವರು Voter ID, Aadhaar Card, ವಯಸ್ಸಿನ ಪ್ರಮಾಣ ಪತ್ರ, ವಾಹನ ಪರವಾನಿಗೆ, ಪಾಸ್ ಪೋರ್ಟ್ ಅಳತೆ ಫೋಟೊ, ಮೊಬೈಲ್ ಸಂಖ್ಯೆ, ಸ್ವಯಂ ಘೋಷಿತ ಪ್ರಮಾಣ ಪತ್ರ ಹೊಂದಿರಬೇಕು. ಈ ಎಲ್ಲ ಪ್ರಮುಖ ದಾಖಲೆಗಳ ಸಮೇತ kar.nic.in ಗೆ ಅಥವಾ ahara.kar.nic.in ಗೆ ಭೇಟಿನೀಡಿ ಬಳಿಕ ಪಡಿತರ ಇ ಕಾರ್ಡ್ ಅನ್ನುವ ಆಪ್ಶನ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಇಂಗ್ಲಿಷ್ , ಕನ್ನಡ ಭಾಷೆ ಆಯ್ಕೆ ಸಿಗಲಿದೆ. ಅದರಲ್ಲಿ APL ಅಥವಾ BPL ಕಾರ್ಡ್ ಎಂಬುದನ್ನು ಕೂಲಂಕುಷವಾಗಿ ನಮೋದಿಸಬೇಕು ಆ ಬಳಿಕ ಅರ್ಜಿಯಲ್ಲಿ ತಿಳಿಸಿದ್ದ ದಾಖಲೆಗಳ ಸಾಫ್ಟ್ ಕಾಪಿ ನೀಡಬೇಕು.
ಇತ್ತೀಚೆಗೆ ಫೇಕ್ ಡಾಕ್ಯುಮೆಂಟ್ ನೀಡಿ ಅಂತ್ಯೋದಯ ಅನ್ನ ಭಾಗ್ಯ ಯೋಜನೆಯ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಇವುಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಲಾಗುತ್ತಿದೆ. ಅದರ ಜೊತೆಗೆ ರೇಶನ್ ಕಾರ್ಡ್ ಹೊಸದಾಗಿ ಸಲ್ಲಿಸುವವರಿಗೂ ಸರಿಯಾದ ದಾಖಲಾತಿಯನ್ನೇ ನೀಡುವಂತೆ ಕೂಡ ತಿಳಿಸಲಾಗಿದೆ. ಈ ಮೂಲಕ ಜೂನ್ ಮೊದಲ ವಾರಕ್ಕೆ ಹೊಸ ರೇಶನ್ ಕಾರ್ಡ್ ಗೆ ನೀವು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.