ಸೋಮವಾರ ಶಿವ ಮತ್ತು ಚಂದ್ರದೇವರ ದಿನ. ಹಿಂದೂ ಧರ್ಮದ ಪ್ರಕಾರ, ಸೋಮವಾರವನ್ನು ವಾರದ ಎರಡನೇ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಶಿವನನ್ನು ಪೂಜಿಸುವುದು ವಾಡಿಕೆ. ಶಿವನನ್ನು ಮೆಚ್ಚಿಸಲು ಯಶಸ್ವಿಯಾದ ವ್ಯಕ್ತಿಯ ಜೀವನದಲ್ಲಿ ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ಇರುತ್ತದೆ ಎಂದು ನಂಬಲಾಗಿದೆ.
ವಿಪರೀತ ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ..? ಹಾಗಾದ್ರೆ ಇಲ್ಲಿದೆ ನೋಡಿ ಪರಿಹಾರ!
ಅದರಲ್ಲೂ ವೈಶಾಖ ಮಾಸದ ಸೋಮವಾರದ ದಿನವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ವೈಶಾಖ ಮಾಸದ ಸೋಮವಾರ ಮಾತ್ರವಲ್ಲ ಪ್ರತಿ ತಿಂಗಳ ಸೋಮವಾರ ವಿಶೇಷತೆ ಪಡೆದಿದೆ. ಭಕ್ತರು ಶಿವನನ್ನು ಪ್ರಾರ್ಥಿಸಿ, ಶಿವನಿಗೆ ವಿಶೇಷ ಪೂಜೆ ಸಲ್ಲಿಸಿ, ಸೋಮವಾರ ವೃತ ಮಾಡ್ತಾರೆ. ಸೋಮವಾರ ಕೆಲ ಕೆಲಸಗಳನ್ನು ಮಾಡುವುದು ಒಳ್ಳೆಯದು ಎಂದು ನಂಬಲಾಗಿದೆ.
ಸಿಹಿ ಅರ್ಪಣೆ : ಆರೋಗ್ಯ, ಆಯಸ್ಸು, ಐಶ್ವರ್ಯವನ್ನು ಜನರು ಬಯಸ್ತಾರೆ. ಕುಟುಂಬಸ್ಥರ ಆರೋಗ್ಯ ಸದಾ ಚೆನ್ನಾಗಿರಬೇಕೆಂದು ಬಯಸುವವರು ಸೋಮವಾರದ ದಿನ ಶಿವನಿಗೆ ವಿಶೇಷ ಪೂಜೆ ಸಲ್ಲಿಸಬೇಕು. ಪೂಜೆ ವೇಳೆ ದೇವರಿಗೆ ಬೇಳೆ ಹಿಟ್ಟಿನಿಂದ ಮಾಡಿದ ಯಾವುದೇ ಸಿಹಿ ಪದಾರ್ಥವನ್ನು ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ಕುಟುಂಬ ಸದಸ್ಯರ ಆರೋಗ್ಯ ಸುಧಾರಿಸುತ್ತದೆ.
ಹಾಲು – ಜೇನುತುಪ್ಪ : ಬೆಳಿಗ್ಗೆ ಸ್ನಾನ ಮಾಡಿದ ನಂತರ ಮಹಾದೇವನ ಪೂಜೆ ನಡೆಯುತ್ತದೆ. ಉದ್ಯೋಗದಲ್ಲಿ ವೃದ್ಧಿ, ವ್ಯವಹಾರದಲ್ಲಿ ಯಶಸ್ಸು ಸಿಗ್ಬೇಕೆಂದು ಬಯಸುವವರು ಸೋಮವಾರದ ದಿನ ಬೆಳಿಗ್ಗೆ ಸ್ನಾನ ಮಾಡಿ, ಶಿವನಿಗೆ ಪೂಜೆ ಸಲ್ಲಿಸಬೇಕು. ಈ ವೇಳೆ ಹಾಲು ಮತ್ತು ಜೇನುತುಪ್ಪವನ್ನು ಅರ್ಪಿಸಿದ್ರೆ ಒಳ್ಳೆಯದು. ಉದ್ಯೋಗ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳು ಇದ್ರಿಂದ ದೂರವಾಗುತ್ತವೆ. ಶಿವನ ಕೃಪೆಗೆ ಪಾತ್ರರಾಗುವ ನೀವು, ಉದ್ಯೋಗದಲ್ಲಿ ಪ್ರಗತಿ ಕಾಣುತ್ತೀರಿ ಎಂದು ನಂಬಲಾಗಿದೆ.
ಶ್ರೀಗಂಧ : ಸೋಮವಾರ ಶಿವನ ದೇವಸ್ಥಾನದಲ್ಲಿ ಜಲಾಭಿಷೇಕ ನಡೆಯುತ್ತದೆ. ಹಾಗೆ ಶಿವಲಿಂಗವನ್ನು ಮನೆಯಲ್ಲಿಟ್ಟು ಪೂಜೆ ಮಾಡುವವರು ಕೂಡ ಜಲಾಭಿಷೇಕ ಮಾಡ್ತಾರೆ. ಅಭಿಷೇಕದ ನಂತರ ಸೋಮವಾರದಂದು ಶಿವಲಿಂಗದ ಮೇಲೆ ಶ್ರೀಗಂಧದವನ್ನು ಲೇಪಿಸುವುದು ಒಳ್ಳೆಯದು. ಜೀವನದಲ್ಲಿ ಸಂತೋಷ ಮತ್ತು ಶಾಂತಿ ಬಯಸುವ ಭಕ್ತರು, ಶ್ರೀಗಂಧವನ್ನು ಅರ್ಪಿಸಿದ್ರೆ ಮನೆ ಹಾಗೂ ಮನಸ್ಸಿನಲ್ಲಿ ಸದಾ ಶಾಂತಿ, ಸಂತೋಷ ನೆಲೆಸಿರುತ್ತದೆ.
ಪ್ರಾರ್ಥನೆ : ಶಿವನಿಗೆ ಪ್ರಿಯವಾದ ಹೂವು ಮತ್ತು ಹಣ್ಣುಗಳನ್ನು ಅರ್ಪಿಸಿ, ನಂಬಿಕೆಯ ಪ್ರಕಾರ ಆರತಿ ಮಾಡಲಾಗುತ್ತದೆ. ಶಿವ ಒಲಿಯಬೇಕೆಂದ್ರೆ ಭೋಲೇನಾಥನನ್ನು ಮನಃಪೂರ್ವಕವಾಗಿ ಧ್ಯಾನಿಸಬೇಕು. ಆಗ ಮನಸ್ಸು ಪ್ರಸನ್ನವಾಗುತ್ತದೆ. ಶಿವ ಪೂಜೆಯಲ್ಲಿ ಪ್ರಾರ್ಥನೆ ಕೂಡ ಮಹತ್ವ ಪಡೆಯುತ್ತದೆ.
ಹಸಿರು ಬಣ್ಣ : ಭೋಲೆನಾಥನ ನೆಚ್ಚಿನ ಬಣ್ಣ ಹಸಿರು. ಈ ಬಣ್ಣದ ಬಟ್ಟೆಗಳನ್ನು ಧರಿಸಿ ಪೂಜೆ ಮಾಡುವುದಕ್ಕೆ ವಿಶೇಷ ಮನ್ನಣೆ ಇದೆ. ಅಲ್ಲದೆ, ಹಳದಿ, ಕೆಂಪು ಅಥವಾ ಬಿಳಿ ಬಣ್ಣದ ಬಟ್ಟೆಗಳನ್ನು ಸಹ ಧರಿಸಬಹುದು. ಆದರೆ ಪುರಾಣಗಳ ಪ್ರಕಾರ, ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಿ ಎಂದಿಗೂ ಶಿವನ ಪೂಜೆ ಮಾಡಬಾರದು.
ಹೂಡಿಕೆ: ಸೋಮವಾರದಂದು ಹೂಡಿಕೆ ಮಾಡುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ನೀವು ಹೂಡಿಕೆಯಲ್ಲಿ ಲಾಭವನ್ನು ಗಳಿಸಲು ಬಯಸಿದರೆ, ಈ ದಿನದಂದು ಶಿವನನ್ನು ಆರಾಧಿಸಿದ ನಂತರ ಹೂಡಿಕೆ ಮಾಡಿ. ನೀವು ಚಿನ್ನ, ಬೆಳ್ಳಿ ಅಥವಾ ಷೇರುಗಳಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಸೋಮವಾರದ ದಿನವನ್ನು ಆಯ್ಕೆಮಾಡಿಕೊಳ್ಳಬಹುದು.