ವಿದೇಶಿಗರು ಹಾಗೂ ಭಾರತೀಯರ ಜೀವನ ಶೈಲಿ ಭಿನ್ನವಾಗಿದೆ. ಕೌಟುಂಬಿಕ ಹಲ್ಲೆ, ಹಿಂಸೆ ಸೇರಿದಂತೆ ಗಂಭೀರ ಸಮಸ್ಯೆಯಲ್ಲಿ ವಿಚ್ಛೇದನ ಅನಿವಾರ್ಯ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.
ಎಲ್ಲರೂ ಅಂದುಕೊಂಡಂತೆ ವಿಚ್ಛೇದನ ಪ್ರಕ್ರಿಯೆ ಅಷ್ಟು ಸುಲಭವಲ್ಲ. ಇಲ್ಲಿ ನಾನಾ ಸಮಸ್ಯೆಗಳು ಎದುರಾಗುತ್ತವೆ. ಮಹಿಳೆ ಅದ್ರಲ್ಲೂ ಕೆಲಸವಿಲ್ಲದ ಗೃಹಿಣಿ ಡಿವೋರ್ಸ್ ನಿರ್ಧಾರಕ್ಕೆ ಬರುವ ಮೊದಲು ಪ್ರತಿಯೊಂದು ಅಂಶವನ್ನು ಅರ್ಥ ಮಾಡಿಕೊಳ್ಳಬೇಕು. ವಿಚ್ಛೇದನಕ್ಕಿಂತ ಮೊದಲು ನೀವು ಯಾವೆಲ್ಲ ವಿಷ್ಯವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನಾವಿಂದು ನಿಮಗೆ ಹೇಳ್ತೇವೆ.

ವಿಚ್ಛೇದನಕ್ಕಿಂತ ಮೊದಲು ನೆನಪಲ್ಲಿಡಬೇಕಾದ ವಿಷಯ :-
*ವಿಚ್ಛೇನದ ಬಗ್ಗೆ ಕಾನೂನು ಸಲಹೆ
*ಆರ್ಥಿಕ ಸ್ಥಿತಿ
*ಮಕ್ಕಳಾದ್ಮೇಲೆ ವಿಚ್ಛೇದನ
*ಮಾನಸಿಕ ಬೆಂಬಲ ಮುಖ್ಯ
*ಎಲ್ಲವನ್ನೂ ನಿಭಾಯಿಸುವ ಶಕ್ತಿ
ವಿಚ್ಛೇನದ ಬಗ್ಗೆ ಕಾನೂನು ಸಲಹೆ:- ಮೊದಲು ವಿಚ್ಛೇದನ ಪ್ರಕ್ರಿಯೆಯಲ್ಲಿ ಏನೆಲ್ಲ ಮಾಡಬೇಕು ಎಂಬುದನ್ನು ವಕೀಲರಿಂದ ತಿಳಿದುಕೊಳ್ಳಿ. ಹಕ್ಕುಗಳು, ಜವಾಬ್ದಾರಿಗಳು ಮತ್ತು ಒಳಗೊಂಡಿರುವ ಕಾನೂನು ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಿ.
ಆರ್ಥಿಕ ಸ್ಥಿತಿ:– ಮೊದಲು ನಿಮ್ಮ ಆರ್ಥಿಕ ಸ್ಥಿತಿ ಗಮನಿಸಿ. ನೀವು ಕನಿಷ್ಠ ಮೂರು ತಿಂಗಳಾದ್ರೂ ಜೀವನ ನಡೆಸುವಷ್ಟು ಹಣ ಹೊಂದಿರಬೇಕು. ನಿಮ್ಮೆಲ್ಲ ಆಸ್ತಿಯ ದಾಖಲೆಯನ್ನು ಒಂದೇ ಕಡೆ ಇಟ್ಟುಕೊಳ್ಳಿ. ವಿಚ್ಛೇದನದ ಸಮಯದಲ್ಲಿ ಇದನ್ನು ತೋರಿಸಬೇಕು
ಮಕ್ಕಳಾದ್ಮೇಲೆ ವಿಚ್ಛೇದನ : ಮಕ್ಕಳ ಓದು, ಅವರ ಜೀವನ ನಿರ್ವಹಣೆಗೆ ನಿಮ್ಮ ಬಳಿ ಹಣದ ಜೊತೆ ಸಮಯ, ತಾಳ್ಮೆ ಎಲ್ಲವೂ ಅಗತ್ಯವಿರುತ್ತದೆ. ಮಕ್ಕಳಾದ್ಮೇಲೆ ವಿಚ್ಛೇದನ ಪಡೆಯುವ ದಂಪತಿ ಆಗಾಗ ಭೇಟಿಯಾಗ್ಬೇಕಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಮಾನಸಿಕ ಬೆಂಬಲ ಮುಖ್ಯ: ನಿಮ್ಮ ಮಾನಸಿಕ ಸ್ಥಿತಿ ಚೆನ್ನಾಗಿರಬೇಕು. ನಿಮ್ಮ ಕುಟುಂಬಸ್ಥರು, ಸ್ನೇಹಿತರ ಬೆಂಬಲ ಕೂಡ ಮುಖ್ಯವಾಗುತ್ತದೆ. ವಿಚ್ಛೇದನದ ನಂತ್ರ ನಿಮಗೆ ಒಂಟಿತನ, ಆತಂಕ ಕಾಡುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ನಿಮ್ಮ ಆಪ್ತರು ನೆರವಿಗೆ ಬರ್ತಾರೆ.

