ಜೀವನದಲ್ಲಿ ನಡೆದ ಕಹಿ ಘಟನೆಯಿಂದ ಹೊರಬರಲಾರದೆ ಖಿನ್ನತೆಗೆ ಒಳಗಾಗುತ್ತಾರೆ, ಖಿನ್ನತೆ ಎಂಬುದು ನಿಮ್ಮ ಮನಸ್ಸನ್ನು ಹಲವು ರೀತಿಯಲ್ಲಿ ಬದಲಾಯಿಸುತ್ತದೆ, ವಾಸ್ತವಕ್ಕೆ ದೂರವಿರುವಂತಹ ವಿಚಾರಗಳನ್ನೇ ಸತ್ಯ ಎಂದು ನಂಬಿರುತ್ತಾರೆ. ಖಿನ್ನತೆಗೆ ಒಳಗಾದ ಮನಸ್ಸು ನಿರಂತರವಾಗಿ ನಿರಾಶಾವಾದಿ ಮೋಡ್ನಲ್ಲಿದೆ ಮತ್ತು ಪುನರಾವರ್ತಿತ ನಕಾರಾತ್ಮಕ ಆಲೋಚನೆಗಳನ್ನು ಹೊರಹಾಕುತ್ತದೆ ಮತ್ತು ನಿಮ್ಮ ಅಸ್ತಿತ್ವವನ್ನು ಪ್ರಶ್ನಿಸುವಂತೆ ಮಾಡುತ್ತದೆ, ದೈನಂದಿನ ಕೆಲಸಗಳನ್ನು ಮಾಡುವ ಶಕ್ತಿಯನ್ನು ನೀವು ಕಳೆದುಕೊಳ್ಳಬಹುದು.
ಜೀವನದ ಸಾಮಾನ್ಯ ಆದರೆ ಸುಂದರವಾದ ಸಂಗತಿಗಳಿಂದ ಸಂತೋಷವನ್ನು ಅನುಭವಿಸದಂತೆ ಮಾಡುತ್ತದೆ. ಆತ್ಮಹತ್ಯಾ ಅಥವಾ ಸ್ವಯಂ-ಹಾನಿಕಾರಕ ಆಲೋಚನೆಗಳು ಖಿನ್ನತೆಯಲ್ಲಿ ಅತಿರೇಕವಾಗಿದ್ದು, ವ್ಯಕ್ತಿಯು ತನ್ನ ಬಗ್ಗೆ ಆಲೋಚನೆ ಂಆಡುವುದಾಗಲಿ ಭವಿಷ್ಯದ ಕನಸನ್ನು ಕಾಣುವುದನ್ನೇ ಮರೆತುಬಿಡುತ್ತಾರೆ. ಮಾನಸಿಕ ಖಿನ್ನತೆಯಿಂದ ಹೊರಬರಲು ಆಹಾರ, ಮನೆಮದ್ದುಗಳೂ ಸಹಾಯ ಮಾಡುತ್ತವೆ. ನೀವು ಮಾನಸಿಕವಾಗಿ ಕುಗ್ಗುತ್ತಿದ್ದರೆ ನಿಮ್ಮ ಆಹಾರ ಶೈಲಿಯನ್ನು ಬದಲಿಸಿಕೊಳ್ಳಿ. ಇದರಿಂದ ದೇಹ ಚೈತನ್ಯಪೂರ್ಣವಾಗಿರುತ್ತದೆ. ಅಲ್ಲದೆ ಮಾನಸಿಕವಾಗಿಯೂ ಖುಷಿಯಾಗಿರುವಂತೆ ಮಾಡುತ್ತದೆ.
ಚಿಯಾ ಬೀಜಗಳು
ದೈಹಿಕ ಆರೋಗ್ಯದಂತೆಯೇ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೋಷಕಾಂಶಗಳ ಅಗತ್ಯವಿದೆ. ಮಾನಸಿಕ ಆರೋಗ್ಯವನ್ನು ಸುಧಾರಿಸಲು, ನೀವು ಚಿಯಾ ಬೀಜಗಳನ್ನು ಸೇವಿಸಬೇಕು. ಇದು ಒಮೆಗಾ-3 ಕೊಬ್ಬಿನಾಮ್ಲಗಳು, ಅಮೈನೋ ಆಮ್ಲಗಳು, ಕಬ್ಬಿಣ ಮತ್ತು ವಿಟಮಿನ್ ಬಿ ನಂತಹ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಮೆದುಳಿನಲ್ಲಿ ರಾಸಾಯನಿಕಗಳ ಉತ್ಪಾದನೆಯನ್ನು ಸರಿಯಾಗಿ ಮಾಡುತ್ತದೆ ಇದರಿಂದಾಗಿ ಮನಸ್ಥಿತಿಯು ಉತ್ತಮವಾಗುತ್ತದೆ.
ಡಾರ್ಕ್ ಚಾಕಲೇಟ್
ಡಾರ್ಕ್ ಚಾಕೊಲೇಟ್ ನಮ್ಮ ಒತ್ತಡವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಚಾಕೊಲೇಟ್ ಇಷ್ಟಪಡದವರು ಬಹಳ ಕಡಿಮೆ. ಮನಸ್ಸನ್ನು ರಿಫ್ರೆಶ್ ಮಾಡಲು ಅಥವಾ ಒತ್ತಡವನ್ನು ಕಡಿಮೆ ಮಾಡಲು ವೈದ್ಯರು ಸಹ ಚಾಕೊಲೇಟ್ ತಿನ್ನಲು ಶಿಫಾರಸು ಮಾಡುತ್ತಾರೆ. ಹೀಗಾಗಿ ಮಧುಮೇಹದ ಸಮಸ್ಯೆ ಇಲ್ಲದವರು ಮಾನಸಿಕ ಖಿನ್ನತೆ, ಒತ್ತಡದಿಂದ ಹೊರಬರಲು ಡಾರ್ಕ್ ಚಾಕಲೇಟ್ ಸೇವನೆ ಮಾಡಬಹುದು.
ಬ್ರೊಕೊಲಿ
ಆರೋಗ್ಯಕ್ಕೆ ವರದಾನವಾದ ಬ್ರೊಕೊಲಿಯು ವಿಟಮಿನ್ B6 ನಿಂದ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ವರೆಗೆ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇವುಗಳು ವಿಶ್ರಾಂತಿಯನ್ನು ಹೆಚ್ಚಿಸುವ ಮೂಲಕ ನಮ್ಮ ಮನಸ್ಥಿತಿಯನ್ನು ಹೆಚ್ಚಿಸುವ ಅಗತ್ಯ ಪೋಷಕಾಂಶಗಳಾಗಿವೆ. ಇದು ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅಲ್ಲದೆ ದೇಹಕ್ಕೆ ಶಕ್ತಿಯನ್ನೂ ಪೂರೈಸಲು ಬ್ರೊಕೊಲಿ ಸಹಾಯ ಮಾಡುತ್ತದೆ
ಸಿಹಿ ಗೆಣಸು
ಸಿಹಿ ಗೆಣಸಿನಲ್ಲಿ ಕಾರ್ಬೋಹೈಡ್ರೇಟ್ಗಳಂತಹ ಪೋಷಕಾಂಶಗಳಿಂದ ತುಂಬಿದೆ. ಒತ್ತಡವನ್ನು ನಿವಾರಿಸಲು ನೀವು ಸಿಹಿ ಗೆಣಸು ತಿನ್ನಬಹುದು. ಸಿಹಿ ಗೆಣಸು ಖಿನ್ನತೆಯನ್ನು ತಡೆಯುವುದಲ್ಲದೆ, ಆತಂಕವನ್ನು ಹೋಗಲಾಡಿಸುವ ಗುಣಗಳನ್ನು ಹೊಂದಿದೆ. ಅಲ್ಲದೆ, ಅದನ್ನು ತಿಂದ ನಂತರ, ಮೂಡ್ ಕೂಡ ಫ್ರೆಶ್ ಆಗಲು ಪ್ರಾರಂಭಿಸುತ್ತದೆ, ಏಕೆಂದರೆ ಅದರ ರುಚಿ ಅಷ್ಟು ಅದ್ಭುತವಾಗಿರುತ್ತದೆ.
ಇನ್ನೂ ಡಿಪ್ರೆಶನ್ ನಿಂದ ಹೊರಬರಲು ಸಮಯ ಬೇಕಾದರೂ ಸಮಾಧಾನದಿಂದಿರಲು ಕೆಲವು ಸಂಗತಿಗಳನ್ನು ಫಾಲೋ ಮಾಡಬಹುದು.
ಆಗಿ ಹೋಗಿರುವುದನ್ನೇ ನೆನೆದು ಮನಸ್ಸನ್ನು ರಾಡಿ ಮಾಡಿಕೊಳ್ಳಬೇಡಿ. ಅದನ್ನು ಒಪ್ಪಿಕೊಳ್ಳಿ. ಪ್ರೀತಿಯೇ ಎಲ್ಲವೂ ಅಲ್ಲ. ಅದಕ್ಕಿಂತ ಜೀವನ ದೊಡ್ಡದಿದೆ ಎಂದು ಭಾವಿಸಿ
ಸ್ನೇಹಿತರೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯಿರಿ. ಪಿಕ್’ನಿಕ್, ಟ್ರಿಪ್’ಗೆ ಹೋಗಿ. ಹೊಸ ಜಾಗ, ಸ್ನೇಹಿತರೊಂದಿಗಿನ ಮಸ್ತಿ ನಿಮ್ಮ ನೋವನ್ನು ಮರೆಸಲು ಸಹಾಯ ಮಾಡುತ್ತದೆ.
ಒಳ್ಳೆಯ ಸಂಗೀತ ಕೇಳಿ. ಸಿನಿಮಾ ನೋಡಿ. ಒಳ್ಳೆಯ ಪುಸ್ತಕ ಓದಿ
ಮರೆತು ಹೋಗಿರುವ ಹವ್ಯಾಸಗಳನ್ನು ಮತ್ತೆ ಶುರು ಮಾಡಿ
ಎಲ್ಲರ ಬಳಿಯು ನಿಮ್ಮ ಬ್ರೇಕ್ ಅಪ್ ಕಥೆಯನ್ನು ಹೇಳಿಕೊಳ್ಳಬೇಡಿ. ನಿಮ್ಮ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುವ ಸಾಧ್ಯತೆ ಇರುತ್ತದೆ.
ಬ್ರೇಕ್ ಅಪ್ ಆದ ಕೂಡಲೇ ಇನ್ನೊಂದು ಪ್ರೀತಿಯಲ್ಲಿ ಬೀಳಬೇಡಿ. ಸ್ವಲ್ಪ ಸಮಯ ಸುಮ್ಮನಿದ್ದು ಬಿಡಿ
ನಿಮ್ಮ ತಪ್ಪಿಲ್ಲದಿದ್ದರೆ ಕೊರಗಬೇಡಿ. ಕಾಲ ಎಲ್ಲವನ್ನು ಸರಿ ಮಾಡುತ್ತದೆ.
ಮನಸ್ಸಿನ ಭಾವನೆಗಳನ್ನು ಅದುಮಬೇಡಿ. ಎಲ್ಲವನ್ನೂ ಹೊರಹಾಕಿ ಹಗುರಾಗಿ ಬಿಡಿ
ನಕಾರಾತ್ಮಕ ಜನರಿಂದ ದೂರವಿರಿ. ಆದಷ್ಟು ಪ್ರೋತ್ಸಾಹ ನೀಡುವವರ ಜೊತೆ ಇರಿ
ನಿಮಗಿಷ್ಟವಾದ ಕೆಲಸದಲ್ಲಿ, ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ. ಒಂದಷ್ಟು ದಿನ ಭಾವನೆಗಳ ತೀವ್ರತೆ ಇರುತ್ತದೆ. ಕ್ರಮೇಣ ಕಡಿಮೆಯಾಗುತ್ತದೆ.