ಗಡಿಬಿಡಿಯ ಹೊರತಾಗಿ ಇನ್ನೇನೂ ಇಲ್ಲ ಅನುಭವಿಸುವುದಕ್ಕೆ ಎನ್ನುವಂತೆ ಬದುಕುತ್ತೇವೆ ನಾವು. ಎಲ್ಲಿಯವರೆಗೆ ಎಂದರೆ ಎಷ್ಟೇ ದುಡಿದರೂ ಕೂತು ತಿನ್ನುವುದಕ್ಕೆ ನಮಗೆ ಸಮಯವಿಲ್ಲ. ಅದಲ್ಲದೆ ವಾಸ್ತು ಶಾಸ್ತ್ರದ ನಿಯಮಗಳ ಬಗ್ಗೆ ಇಂದಿಗೂ ಅನೇಕರಿಗೆ ತಿಳಿದಿಲ್ಲ. ಆದ್ದರಿಂದಲೇ ದೈನಂದಿನ ಜೀವನದಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಾರೆ,
ಇದು ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದು ಸರಿಯಲ್ಲ. ಏಕೆಂದರೆ ಹೀಗೆ ಮಾಡುವುದರಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ. ಇಂತಹ ಜನರು, ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದುದರಿಂದ ಹಾಸಿಗೆಯಲ್ಲಿ ಕುಳಿತು ತಿನ್ನೋದು ನಿಲ್ಲಿಸಿ.
ಲಕ್ಷ್ಮೀ ವಾಸ ಪ್ರತಿದಿನ ಹಾಸಿಗೆಯಲ್ಲಿ ಕುಳಿತು ಊಟ ಮಾಡಿದರೆ ಲಕ್ಷ್ಮಿ ದೇವಿಯು ನಿಮ್ಮನ್ನು ಬಿಟ್ಟು ಹೋಗುತ್ತಾಳೆ. ಹಾಸಿಗೆಯು ಮಲಗುವ ಸ್ಥಳ, ಅಲ್ಲಿ ಎಂದಿಗೂ ತಿನ್ನಬಾರದು. ನೆಮ್ಮದಿ ಹಾಸಿಗೆಯ ಮೇಲೆ ಕುಳಿತು ತಿನ್ನುವುದರಿಂದ ಮನೆಯಲ್ಲಿ ವಿವರಿಸಲಾಗದ ಶಾಂತಿಯ ನಷ್ಟವು ಉಂಟಾಗುತ್ತದೆ. ಆದ್ದರಿಂದ ನೀವು ಈ ಅಭ್ಯಾಸವನ್ನು ಬದಲಾಯಿಸಬೇಕಾಗಿದೆ.
ಹಾಸಿಗೆಯ ಮೇಲೆ ಕುಳಿತು ತಿನ್ನುವವರು ಸಾಲದ ಸಮಸ್ಯೆಗಳಲ್ಲಿ ಸಿಳುಕುತ್ತಾರೆ. ಅದ್ದರಿಂದ, ಹಾಸಿಗೆಯ ಮೇಲೆ ಕುಳಿತು ಆಹಾರ ಸೇವಿಸುವುದನ್ನು ತಪ್ಪಿಸಿ. ನಿದ್ರೆ ಹಾಸಿಗೆಯಲ್ಲಿ ಕುಳಿತು ಊಟ ಮಾಡುವವರಿಗೆ ನಿದ್ದೆ ಬರುವುದಿಲ್ಲ. ಅನೇಕ ಬಾರಿ ಆಹಾರದ ವಾಸನೆಯು ಜಿರಳೆಗಳನ್ನು ಹಾಸಿಗೆಗೆ ಆಕರ್ಷಿಸುತ್ತದೆ. ಇದರಿಂದ ನಿಮ್ಮ ಆರೋಗ್ಯಕ್ಕೂ ಕೂಡ ಸಮಸ್ಯೆ ಎದುರಾಗಬಹುದು.
ಅಜೀರ್ಣ:
ಹಾಸಿಗೆಯಲ್ಲಿ ಕುಳಿತು ತಿಂದು, ನಂತರ ಅಲ್ಲೇ ಮಲಗುವುದರಿಂದ ಜೀರ್ಣಕಾರಿ ತೊಂದರೆಗಳು ಶುರುವಾಗುತ್ತವೆ. ಹಾಸಿಗೆಯಲ್ಲಿ ಕುಳಿತು ಪ್ರತಿದಿನ ತಿನ್ನುವುದು, ಹಾಸಿಗೆಯಲ್ಲಿ ಮಲಗಿ ಅಥವಾ ಸ್ಲಚ್ ಭಂಗಿಯಲ್ಲಿ ಕುಳಿತು ತಿನ್ನುವುದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಅಜೀರ್ಣ, ಆಸಿಡ್ ರಿಫ್ಲಕ್ಸ್ ಇತ್ಯಾದಿಗಳನ್ನು ಉಂಟುಮಾಡಬಹುದು. ಕುರ್ಚಿಯ ಮೇಲೆ ನೇರವಾಗಿ ಕುಳಿತು ತಿನ್ನುವುದು ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ.
ಆಹಾರದ ನಿಯಂತ್ರಣದ ಕೊರತೆ:
ಸಾಮಾನ್ಯವಾಗಿ ನಾವು ಹಾಸಿಗೆಯಲ್ಲಿ ಕುಳಿತು ಊಟ ಮಾಡುವಾಗ ನಾವು ಟಿವಿಯಲ್ಲಿ ಏನನ್ನಾದರೂ ನೋಡುತ್ತಿರುತ್ತೇವೆ ಅಥವಾ ಆನ್ಲೈನ್ನಲ್ಲಿ ಏನನ್ನಾದರೂ ಸ್ಟ್ರೀಮ್ ಮಾಡುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ ಮನಸ್ಸು ಚಂಚಲವಾಗಿರುತ್ತದೆ. ಈ ವೇಳೆ ನಾವು ಅತಿಯಾಗಿ ತಿನ್ನುತ್ತೇವೆ ಅಥವಾ ಕಡಿಮೆ ತಿನ್ನುತ್ತೇವೆ. ಆದ್ದರಿಂದ, ಇದು ನಿಮ್ಮ ಊಟದ ಭಾಗದ ಗಾತ್ರವನ್ನು ಅಡ್ಡಿಪಡಿಸುತ್ತದೆ.
ನಿದ್ರೆಗೆ ತೊಂದರೆ:
ಹಾಸಿಗೆ ಮೇಲೆ ಕುಳಿತು ತಿನ್ನುವಾಗ ಹಾಸಿಗೆಯ ಮೇಲೆ ಆಹಾರವನ್ನು ಚೆಲ್ಲಬಹುದು. ಇದರಿಂದ ಕಲೆಗಳು ಉಂಟಾಗಬಹುದು. ಇದು ಉತ್ತಮ ನಿದ್ರೆಯ ವಾತಾವರಣವನ್ನು ಅಡ್ಡಿಪಡಿಸುತ್ತದೆ. ವಿಶ್ರಾಂತಿ ಮತ್ತು ಉತ್ತಮ ಗುಣಮಟ್ಟದ ನಿದ್ರೆ ಪಡೆಯಲು ನಿದ್ರೆಗೆ ಹೋಗುವಾಗ ಸುತ್ತಮುತ್ತಲಿನ ಸ್ವಚ್ಛತೆಯನ್ನು ಹೊಂದಿರಬೇಕು ಎಂದು ತಜ್ಞರು ಶಿಫಾರಸು ಮಾಡುತ್ತಾರೆ.