ಸಾಮಾನ್ಯವಾಗಿ ಧೂಳು, ಮಾಲಿನ್ಯ, ವಿಷಕಾರಕ ಸಸ್ಯಗಳು, ಇಂಜೆಕ್ಷನ್ ಮತ್ತು ಡ್ರಗ್ಸ್ ಈ ಕಾರಣಗಳಿಂದ ಅಲರ್ಜಿ ಉಂಟಾಗುವುದು. ಕೆಲವರಿಗೆ ಅತೀ ಶಾಖ ಅಥವಾ ಅತೀ ಕಡಿಮೆ ಉಷ್ಣತೆ ಇರುವ ಸ್ಥಳಕ್ಕೆ ಹೋದಾಗ ಕೂಡ ಅಲರ್ಜಿ ಉಂಟಾಗುವುದು.
ಕೆಲವೊಮ್ಮೆ ಶುಚಿಯಿಲ್ಲದ ಅಹಾರ ಸೇವನೆ , ಜೀವನ ಶೈಲಿ, ದೈಹಿಕ ಸುಸ್ತು, ಮಾನಸಿಕ ಒತ್ತಡ ಇವುಗಳು ಕೂಡ ಅಲರ್ಜಿ ಸಮಸ್ಯೆಗೆ ಒಂದು ಕಾರಣವಾಗಿದೆ. ಈ ರೀತಿ ಅಲರ್ಜಿ ಉಂಟಾದರೆ ತಲೆ ನೋವು, ಮುಖ ಮೈ ಊದಿಕೊಳ್ಳುವುದು, ಚರ್ಮದಲ್ಲಿ ಕೆಂಪು ಗುಳ್ಳೆಗಳು ಕಂಡುಬರುತ್ತದೆ.
ಅಲರ್ಜಿಗೆ ಮನೆ ಮದ್ದು:
ಗಂಧವನ್ನು ತೇಯ್ದು ಅದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ, ತುರಿಕೆ ಕಂಡು ಬರುವ ಜಾಗದಲ್ಲಿ ಹಾಕಿದರೆ ತುರಿಕೆ ಕಡಿಮೆಯಾಗುವುದು.
ಬಾದಾಮಿಯನ್ನು ಪೇಸ್ಟ್ ರೀತಿ ಮಾಡಿ ತುರಿಕೆ ಕಂಡು ಬಂದಲ್ಲಿ ಹಚ್ಚಿದರೆ ತುರಿಕೆ ಕಡಿಮೆಯಾಗುವುದು.
ಪುದೀನಾ ಎಲೆಯನ್ನು ಪೇಸ್ಟ್ ಮಾಡಿ ಅದನ್ನು ಒಂದು ಗ್ಲಾಸ್ಗೆ ಹಾಕಿ ಪಾನಕ ರೀತಿ ಮಾಡಿ ಒಂದು ಚಮಚ ಸಕ್ಕರೆ ದಿನಕ್ಕೆ ಎರಡು ಬಾರಿ ಕುಡಿದರೆ ಅಲರ್ಜಿ ಸಮಸ್ಯೆ ನಿವಾರಣೆಯಾಗುವುದು.
ಅಲರ್ಜಿ ಬಂದು ತುಂಬಾ ತುರಿಕೆ ಉಂಟಾದರೆ ಪಪ್ಪಾಯಿ ಬೀಜವನ್ನು ಪೇಸ್ಟ್ ರೀತಿ ಮಾಡಿ ತುರಿಕೆ ಇರುವ ಜಾಗಕ್ಕೆ ಹಚ್ಚಿದರೆ ತುರಿಕೆ ಕಡಿಮೆಯಾಗುವುದು.
3-4 ಚಮಚ ತೆಂಗಿನೆಣ್ಣೆಗೆ 2 ಚಮಚ ನಿಂಬೆ ರಸ ಹಾಕಿ ಮಿಶ್ರ ಮಾಡಿ ಹಚ್ಚಿದರೆ ಅಲರ್ಜಿಯಿಂದ ಮೈ ಕೆಂಪಾಗಿದ್ದರೆ ಅದು ಕಡಿಮೆಯಾಗುವುದು.
ವಿಟಮಿನ್ ಸಿ ಅಧಿಕವಿರುವ ಆಹಾರ ತಿನ್ನಬೇಕು.
ಎರಡು ಚಮಚ ಸೈಡರ್ ವಿನೆಗರ್ ಅನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕುಡಿದರೆ ಅಲರ್ಜಿ ಕಡಿಮೆಯಾಗುವುದು.
ಐದು ಚಮಚ ಹರಳೆಣ್ಣೆಯನ್ನು ಒಂದು ಲೋಟ ಹಣ್ಣಿನ ಜ್ಯೂಸ್ ಅಥವಾ ಬರೀ ನೀರಿನಲ್ಲಿ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅಲರ್ಜಿ ಸಮಸ್ಯೆಯನ್ನು ಹೋಗಲಾಡಿಸಬಹುದು.
ಕ್ಯಾರೆಟ್, ಬೀಟ್ ರೂಟ್, ಸೌತೆಕಾಯಿ ಈ ಮೂರನ್ನು ಮಿಶ್ರ ಮಾಡಿ ಜ್ಯೂಸ್ ತಯಾರಿಸಿ ಕುಡಿದರೆ ಅಲರ್ಜಿ ಸಮಸ್ಯೆ ಕಡಿಮೆಯಾಗುವುದು.
ಸಲಹೆ: ಈ ಮನೆಮದ್ದು ಪಾಲಿಸುವಾಗ ಅಲರ್ಜಿಗೆ ಕಾರಣವಾಗುವ ಆಹಾರಗಳನ್ನು ಅವಾಯ್ಡ್ ಮಾಡಿ.