ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್), ಬೆಂಗಳೂರು, ಇಲ್ಲಿ ಖಾಲಿ ಇರುವ ನರ್ಸಿಂಗ್ ಆಫೀಸರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ 7th ಸಿಪಿಸಿ, ಪೇ ಮೆಟ್ರಿಕ್ಸ್ 2 ಪ್ರಕಾರ ರೂ.9300-34800 ವರೆಗೆ ವೇತನ ಶ್ರೇಣಿ ನೀಡಲಾಗುತ್ತದೆ. ಈ ಹುದ್ದೆಗಳು ಗ್ರೂಪ್ ಬಿ ಪೋಸ್ಟ್ಗಳಾಗಿವೆ. ಆಸಕ್ತರು ಇನ್ನಷ್ಟು ಮಾಹಿತಿಗಳನ್ನು ಕೆಳಗಿನಂತೆ ತಿಳಿದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ನೇಮಕಾತಿ ಪ್ರಾಧಿಕಾರ : ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ
ಹುದ್ದೆಯ ಹೆಸರು : ನರ್ಸಿಂಗ್ ಆಫೀಸರ್
ಹುದ್ದೆಗಳ ಸಂಖ್ಯೆ : 161
ವಿದ್ಯಾರ್ಹತೆ : ಬಿಎಸ್ಸಿ ಹಾನರ್ಸ್ ನರ್ಸಿಂಗ್ / ಬಿಎಸ್ಸಿ ನರ್ಸಿಂಗ್ ಅಥವಾ ಬಿಎಸ್ಸಿ / ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ಪಾಸ್. ಜತೆಗೆ ರಾಜ್ಯ ಅಥವಾ ಕೇಂದ್ರ ಸರ್ಕಾರದ ನರ್ಸಿಂಗ್ ಕೌನ್ಸಿಲ್ ನಲ್ಲಿ ರಿಜಿಸ್ಟ್ರೇಷನ್ ಪಡೆದಿರಬೇಕು.
ಇತರೆ ಅರ್ಹತೆ : ಕನಿಷ್ಠ 50 ಹಾಸಿಗೆಗಳಿರುವ ಆಸ್ಪತ್ರೆಗಳಲ್ಲಿ 2 ವರ್ಷ ಕಾರ್ಯಾನುಭವ ಪಡೆದಿರಬೇಕು.
ಗರಿಷ್ಠ ವಯಸ್ಸಿನ ಅರ್ಹತೆ : 35 ವರ್ಷ.
ಅರ್ಜಿ ಶುಲ್ಕ ವಿವರ
ಸಾಮಾನ್ಯ ಅರ್ಹತೆ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ರೂ.1180.
ಎಸ್ಸಿ / ಎಸ್ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ರೂ.885.
ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
ಪ್ರಮುಖ ದಿನಾಂಕಗಳು
ಆನ್ಲೈನ್ ಅರ್ಜಿ ಸಲ್ಲಿಸುವ ಆರಂಭಿಕ ದಿನಾಂಕ: 18-10-2023
ಆನ್ಲೈನ್ ಅರ್ಜಿ ಸಲ್ಲಿಸುವ ಕೊನೆ ದಿನಾಂಕ : 18-11-2023
ಪರೀಕ್ಷೆ ದಿನಾಂಕ : ಮುಂದಿನ ದಿನಗಳಲ್ಲಿ ನಿಮ್ಹಾನ್ಸ್ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ
– ನಿಮ್ಹಾನ್ಸ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿರಿ.
– ಓಪನ್ ಆಗುವ ವೆಬ್ ಪೇಜ್ನಲ್ಲಿ ‘Proceed’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ನಂತರ ಮತ್ತೊಂದು ವೆಬ್ಪೇಜ್ ಓಪನ್ ಆಗುತ್ತದೆ.
– ಇಲ್ಲಿ ವೈಯಕ್ತಿಕ ಮಾಹಿತಿಗಳು, ವಿದ್ಯಾರ್ಹತೆ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.