ಹುಬ್ಬಳ್ಳಿ: ಹಿಂದುಳಿದ ವರ್ಗಗಳ ಪಾಲಿಗೆ ವರದಾನ ವಾಗಲಿರುವ ಕಾಂತರಾಜು ಆಯೋಗದ ವರದಿಯನ್ನು ಅಂಗೀಕರಿಸಿ, ಹಾಗೂ ಮುಸ್ಲಿಮರ 2 ಬಿ ಮೀಸಲಾತಿಯನ್ನು ಶೇಕಡಾ 8ಕ್ಕ ಏರಿಸಲು ಸರ್ಕಾರ ಮುಂದಾಗುವಂತೆ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಹಿಂದುಳಿದ ವರ್ಗಗಳ ಪರ ಧ್ವನಿ ಎತ್ತುವಂತೆ ಒತ್ತಾಯಿಸಿ ಸಾಮಾಜಿಕ ನ್ಯಾಯ ಸಂರಕ್ಷಣಾ ವೇದಿಕೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬುಧವಾರ ಮಿನಿ ವಿಧಾನ ಸೌಧ ಮುಂದೆ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಸಂರಕ್ಷಣಾ ವೇದಿಕೆ ಮುಖಂಡರಾದ ಎಚ್ ಎಫ್ ಜಕ್ಕಪ್ಪನವರ, ವಸಂತ ಲದ್ವಾ ಮಾತಾನಾಡಿ, ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ನಾಡಿನ ಸಮಸ್ತ ಪ್ರಜೆಗಳಿಗೂ ಸಮಾನ ಅವಕಾಶ ಸಿಗಬೇಕು ಎಂಬುದು ಸಂವಿಧಾನದ ಆಶಯವಾಗಿದೆ. ಈ ದಿಸೆಯಲ್ಲಿ ಸರ್ಕಾರದ ಕಲ್ಯಾಣ ಯೋಜನೆಗಳು ಸಮಾಜದ ಪ್ರತಿಯೊಂದು ಜನ ವರ್ಗಕ್ಕೂತಲುಪಿಸುವುದುನ್ನು ಖಚಿತ ಪಡಿಸಿಕೊಳ್ಳಲು ಮತ್ತು ವಿವಿಧ ಜಾತಿಗಳ ಸ್ಥಿತಿ ಗತಿ ತಿಳಿಯಲು ಸರ್ಕಾರಕ್ಕೆ ಈ ತರಹದ ಸಮೀಕ್ಷೆ ಅನಿವಾರ್ಯ ಇದರ ಉದ್ದೇಶವೇ ಸಮಾಜದ ನ್ಯೂನತೆ ಸರಿಪಡಿಸುವುದಾಗಿದೆ ಎಂದರು.
ಯಾರು ಅವಕಾಶದಿಂದ ವಂಚಿತರಾಗಿದ್ದಾರೆ ಎಷ್ಟರಮಟ್ಟಿಗೆ ಅವಕಾಶ ಕಡಿಮೆಯಾಗಿದೆ ಎಂಬುದನ್ನು ಸಮೀಕ್ಷೆ ತಿಳಿಸಲಿದೆ. ಎಲ್ಲರಿಗೂ ಸಮಾನ ಅವಕಾಶ, ಅಧಿಕಾರ, ಸವಲತ್ತು ತಲುಪಿಸಬೇಕೆಂಬ ಉದ್ದೇಶದಿಂದ ವೈಜ್ಞಾನಿಕ ಮಾದರಿ ಅನುಸರಿಸಿ ವರದಿ ನೀಡಿರುವ ಕಾಂತರಾಜು ಆಯೋಗದ ವರದಿಯ ವಿರುದ್ಧ ಇಂದು ಸಲ್ಲದ ಅಪಪ್ರಚಾರ ಮಾಡಲಾಗುತ್ತಿದೆ.
ಇದು ನಿರಂತರವಾಗಿ ಅಧಿಕಾರ ಅನುಭವಿಸುತ್ತಿರುವ ವರ್ಗಗಳ ಪಿತೂರಿ, ಹಾಗಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೂಡಲೇ ಕಾಂತರಾಜು ಆಯೋಗದ ವರದಿಯನ್ನು ಯಥಾವತ್ತಾಗಿ ಅಂಗೀಕರಿಸಿ ಸಾರ್ವಜನಿಕಗೊಳಿಸಬೇಕು. ಮುಸ್ಲಿಮರ 2ಬಿ ಮೀಸಲಾತಿಯನ್ನು ಶೇಕಡಾ 8ಕ್ಕೆ ಏರಿಸಲು, ಮುಂದಿನ ಚಳಿಗಾಲದ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲು ಒತ್ತಾಯಿಸಿದರು.