ಬೆಂಗಳೂರು :ಬೆಂಗಳೂರು ಸೇರಿದಂತೆ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಕೊರೊನಾ ಚಿಕಿತ್ಸಾ ದರ ಏರಿಕೆ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಆರೋಗ್ಯ ಇಲಾಖೆಗೆ ಕೊರೊನಾ ಚಿಕಿತ್ಸಾ ದರ ಏರಿಕೆ ವಿಚಾರವಾಗಿ ಖಾಸಗಿ ಆಸ್ಪತ್ರೆಗಳು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಕೋವಿಡ್ ಚಿಕಿತ್ಸಾ ವೆಚ್ಚವನ್ನು ಹೆಚ್ಚಳದ ಜೊತೆಗೆ ಇತರೆ ಹಲವು 70 ಕ್ಕೂ ಹೆಚ್ಚು ಚಿಕಿತ್ಸೆಗಳ ದರಗಳ ಏರಿಕೆ ಮಾಡುವಂತೆ ಆರೋಗ್ಯ ಇಲಾಖೆಗೆ ಒತ್ತಾಯಿಸಿವೆ. ಕೊರೊನಾ ಚಿಕಿತ್ಸೆ ಕೊಡಲು ಔಷಧಿಗಳ ದರ ಸೇರಿದಂತೆ ಬೇರೆ ಬೇರೆಯ ಖರ್ಚು ಹೆಚ್ಚಾಗಿದೆ. ಹೀಗಾಗಿ ಕೋವಿಡ್ ಚಿಕಿತ್ಸೆ ದರ ಹೆಚ್ಚಳ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ ಎನ್ನಲಾಗಿದೆ. ಹೀಗಾಗಿ ದರ ಪರಿಷ್ಕರಣೆಗೆ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚ ಏರಿಕೆಯ ವಿಚಾರವಾಗಿ ಇಲಾಖೆ ಒಂದು ಸಮಿತಿ ರಚನೆ ಮಾಡಿದೆ. ತಜ್ಞರ ವರದಿ ಪಡೆದುಉ ಕೋವಿಡ್ ಚಿಕಿತ್ಸಾ ವೆಚ್ಚ ಮರು ಪರಿಷ್ಕರಣೆಯ ಬಗ್ಗೆ ನಿರ್ಣಯ ಕೈಗೊಳ್ಳಲು ಮುಂದಾಗಿದೆ.
