ಬೆಂಗಳೂರು: ಇಂದು ಕನ್ನಡ ಸಿನಿಮಾದ ಹಿರಿಯ ನಿರ್ದೇಶಕ ಕೆ.ವಿ. ರಾಜು ವಿಧಿವಶರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಕೆ.ವಿ.ರಾಜು ಅವರು ದುರಾದೃಷ್ಟವಶಾತ್ ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ದೊಡ್ಡ ನಷ್ಟವಾಗಿದೆ. ಇವರು ಚಿತ್ರರಂಗದಲ್ಲಿ 40ವರ್ಷಕ್ಕೂ ಹೆಚ್ಚು ವರ್ಷಗಳ ಕಾಲಸೇವೆ ಸಲ್ಲಿಸಿದವರಾಗಿದ್ದು, ರವಿಚಂದ್ರನ್ ಹಾಗೂ ರೆಬೆಲ್ ಸ್ಟಾರ್ ಅಂಬರೀಷ್ ಜೊತೆ ನಿಕಟ ಸಂಪರ್ಕದಲ್ಲಿದ್ದವರು.
ಇತ್ತೀಚೆಗೆ ಕನ್ನಡ ಚಿತ್ರಗಳಿಗೆ ಸಂಭಾಷಣೆ ಕೂಡ ಬರೆಯುತ್ತಿದ್ದರು. ಅಭಿಜಿತ್, ಯುದ್ಧಕಾಂಡ, ಸುಂದರಕಾಂಡ ಹಾಗೂ ಇಂದ್ರಜಿತ್ ಚಿತ್ರಗಳಿಂದ ಪ್ರಖ್ಯಾತಿಯನ್ನು ಪಡೆದಿದ್ದವರು. ಇಂತಹ ನಿರ್ದೇಶಕರನ್ನು ಕಳೆದುಕೊಂಡು ಇಡೀ ಚಿತ್ರರಂಗ ಶೋಕ್ ವ್ಯಕ್ತಪಡಿಸಿದೆ. ಕನ್ನಡ ನಟ, ನಟಿಯರು, ನಿರ್ದೇಶಕರುಗಳು ಇವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ, ಇವರ ಅಭಿಮಾನಿಗಳು ಮತ್ತು ಕುಟುಂಬದವರಿಗೆ ಭಗವಂತ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಚಿತ್ರರಂಗ ಪ್ರಾರ್ಥನೆ ಸಲ್ಲಿಸಿದೆ.
