ಅ.1ರಿಂದ ಶಾಶ್ವತ ಖಾತೆ ಸಂಖ್ಯೆ (ಪಾನ್)ಗಾಗಿ ಅರ್ಜಿ ಸಲ್ಲಿಸುವಾಗ ಅಥವಾ ಆದಾಯ ತೆರಿಗೆ ರಿಟರ್ನ್ಗಳನ್ನು ಸಲ್ಲಿಸುವಾಗ ವ್ಯಕ್ತಿಗಳು ತಮ್ಮ ಆಧಾರ್ ನೋಂದಣಿ ಐಡಿಯನ್ನು ಬಳಸಲು ಅವಕಾಶವಿದೆ
2023ರ ಜುಲೈನಲ್ಲಿ ಮಂಡಿಸಿದ್ದ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯನವರು ಐಎಂಎಲ್ ಮೇಲೆ ಶೇ.20 ಮತ್ತು ಬಿಯರ್ ಮೇಲೆ ಶೇ.10 ಅಬಕಾರಿ ಸುಂಕ ಹೆಚ್ಚಿಸಿದ್ದರು. ಈಗ ಮತ್ತೊಮ್ಮೆ ಬಿಯರ್ ಬೆಲೆ ಏರಿಕೆ ಬಗ್ಗೆ ಅಬಕಾರಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಅಕ್ಟೊಬರ್ 1 ರಿಂದ ಬೆಲೆ ಏರಿಕೆಯಾಗುವ ಸಾಧ್ಯತೆ ಖಚಿತವಾದಂತಿದೆ.
ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಟಿಕೆಟ್ ಬುಕ್ಕಿಂಗ್ಗೆ 5% ಡಿಸ್ಕೌಂಟ್!
ಈ ಮದ್ಯ ಬೆಲೆ ಏರಿಕೆ ಹಿನ್ನಲೆ, ಸರ್ಕಾರದ ನಿರ್ಧಾರಕ್ಕೆ ಬಾರ್ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬಿಯರ್ ಮಾರಾಟ ಹೆಚ್ಚಾದ ಸಂದರ್ಭದಲ್ಲಿ ಗ್ರಾಹಕರ ಜೊತೆಗೆ ಮಾರಾಟಗಾರರಿಗೂ ಪರಿಣಾಮ ಬೀಳಲಿದೆ. ಸರ್ಕಾರ ಏರಿಕೆ ಬದಲು ದರ ಇಳಿಕೆ ಬಗ್ಗೆ ಯೋಚನೆ ಮಾಡಿದರೆ ಹೆಚ್ಚು ಮಾರಾಟವಾಗಲಿದೆ. ಈ ಮೂಲಕ ಸರ್ಕಾರ ಮತ್ತು ಮಾಲೀಕರಿಗೆ ಅನೂಕೂಲವಾಗಲಿದೆ ಎನ್ನುತ್ತಿದ್ದಾರೆ.
ಬೆಲೆ ಏರಿಕೆ ವಿವರಗಳನ್ನು ನೋಡುವುದಾದರೆ:
ಬಡ್ವೈಸರ್ ಪ್ರಿಮಿಯಂ: 200 ರಿಂದ 215
ಕೆಎಫ್ ಅಲ್ಟ್ರಾ: 199 ರಿಂದ 220
ಟ್ಯುಬರ್ಗ್ ಸ್ಟ್ರಾಂಗ್: 168 ರಿಂದ 180
ಯುಬಿ ಪ್ರಿಮೀಯಂ: 131 ರಿಂದ 143
ಯುಬಿ ಸ್ಟ್ರಾಂಗ್: 131 ರಿಂದ 142
ಕೆಎಫ್ ಪ್ರಿಮಿಯಂ: 168 ರಿಂದ 180
ಕೆಎಫ್ ಸ್ಟ್ರೋಮ್ : 177 ರಿಂದ 187
ಕೆಎಫ್ ಸ್ಟ್ರಾಂಗ್: 168 ರಿಂದ 180
ಇಷ್ಟೇ ಅಲ್ಲದೆ ಇನ್ನುಳಿದ ಬ್ರ್ಯಾಂಡ್ಗಳ ಮೇಲೂ ಸುಮಾರು 10 ರಿಂದ 20 ರೂ.ವರೆಗೂ ದರ ಏರಿಕೆಯಾಗುವ ಸಾಧ್ಯತೆ ಇದ್ದು, ಅಕ್ಟೋಬರ್ ಮೊದಲ ವಾರವೇ ಹೊಸ ದರಗಳು ಪರಿಷ್ಕರಣೆಗೊಳ್ಳುವ ಸಾಧ್ಯತೆ ಇದೆ.