ಬೆಂಗಳೂರು: ಮದ್ಯದ ಭದ್ರತಾ ಚೀಟಿ ವೆಚ್ಚವನ್ನು ಮದ್ಯ ತಯಾರಕರ ಬದಲಿಗೆ ಗ್ರಾಹಕರಿಗೆ ವರ್ಗಾಯಿಸಿ ಅಬಕಾರಿ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.
ಪ್ರತಿ ಬಾಟಲಿ ಮದ್ಯಕ್ಕೆ 31.74 ಪೈಸೆ ಹೆಚ್ಚುವರಿ ದರವನ್ನು ಗ್ರಾಹಕರು ಪಾವತಿಸಬೇಕಿದೆ.

ಈ ಹಿಂದೆ ಮದ್ಯದ ಬಾಟಲಿಗಳ ಮುಚ್ಚಳದ ಮೇಲೆ ಅಂಟಿಸುವ ಅಬಕಾರಿ ಭದ್ರತಾ ಚೀಟಿಯ ವೆಚ್ಚವು ಸೇರಿ ಮದ್ಯದ ಬಾಟಲಿಯ ಗರಿಷ್ಠ ಮಾರಾಟ ದರ ನಿಗದಿಪಡಿಸಲಾಗುತ್ತಿತ್ತು. ಮದ್ಯ ತಯಾರಕರು ವೆಚ್ಚ ಭರಿಸಬೇಕಿತ್ತು. ಕರ್ನಾಟಕ ಮದ್ಯ ತಯಾರಕರ ಸಂಘದ ಮನವಿಯ ಮೇರೆಗೆ ಮೇ 22 ರಂದು ಅಬಕಾರಿ ಇಲಾಖೆ ಆಯುಕ್ತರು ಆದೇಶ ಹೊರಡಿಸಿ ಮದ್ಯದ ಬಾಟಲಿಯ ಮೇಲಿನ ಮುದ್ರಿತ ದರದಿಂದ ಅಬಕಾರಿ ಭದ್ರತಾ ಚೀಟಿ ವೆಚ್ಚವನ್ನು ಹೊರಗೆ ಇರಿಸಿದ್ದಾರೆ.
ವೈನ್ ಮತ್ತು ಮದ್ಯ ಉತ್ಪನ್ನಗಳ ಗರಿಷ್ಠ ಮಾರಾಟಗಾರ ಎಂಆರ್‌ಪಿ ಲೆಕ್ಕ ಹಾಕುವಾಗ ಅಬಕಾರಿ ಭದ್ರತಾ ಚೀಟಿಗಳ ಚೀಟಿಗಳ ವೆಚ್ಚವನ್ನು ಘೋಷಿತ ಬೆಲೆಯಲ್ಲಿ ತೋರಿಸದೇ ಪ್ರತ್ಯೇಕವಾಗಿ ತೋರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
