Bengaluru: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ರೋಡ್ ರೇಜ್ – ಯುವತಿ ಅಡ್ಡಗಟ್ಟಿ ಯುವಕರ ಪುಂಡಾಟ

ಬೆಂಗಳೂರು:- ಅತ್ತಿಬೆಲೆಯ ಸರ್ಜಾಪುರ ರಸ್ತೆಯಲ್ಲಿ‌ ಕಾರಿನಲ್ಲಿ ತೆರಳುತಿದ್ದ ಯುವತಿಯನ್ನ ಅಡ್ಡಗಟ್ಟಿ ಯುವಕರ ಗುಂಪೊಂದು ಪುಂಡಾಟ ಮೆರೆದಿರುವಂತಹ ಘಟನೆ ಜರುಗಿದೆ. ಯುವಕರ ಭಯಕ್ಕೆ ಬೈಕ್‌ ಮೇಲೆ ಕಾರು ಚಲಾಯಿಸಿಕೊಂಡು ಚಾಲಕಿ ಹೋಗಿದ್ದಾಳೆ. ಕಾರಿನ ಡ್ಯಾಶ್ ಕ್ಯಾಮ್​ನಲ್ಲಿ ಗಲಾಟೆಯ ದೃಶ್ಯಾವಳಿ ಸೆರೆ ಆಗಿದೆ. ಓವರ್ ಟೇಕ್ ಮಾಡುವ ವಿಚಾರವಾಗಿ ಗಲಾಟೆ ಶುರುವಾಗಿದೆ. ಯುವಕರಿಂದ ತಪ್ಪಿಸಿಕೊಳ್ಳಲು ಕಾರನ್ನು ಜೋರಾಗಿ ಓಡಿಸಿದ್ದಾಳೆ. ನಂತರ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದ ಕಿಡಿಗೇಡಿಗಳು, ಕಾರನ್ನು ಯುವಕರು ಅಡ್ಡಗಟ್ಟಿದ್ದಾರೆ. ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲ ಘಟನೆ ಕಂಡುಬಂದಿದೆ.