ಬೆಳಗಾವಿ: ರಥೋತ್ಸವದ ವೇಳೆ ಪಟಾಕಿ ಸಿಡಿದು ರಥದ ಮೇಲ್ಭಾಗಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮದಲ್ಲಿ ನಡೆದಿದೆ.ನಿನ್ನೆ ಶಿವಪೇಟೆ ಗ್ರಾಮದ ಜಡಿಶಂಕರಲಿಂಗ ದೇವರ ಜಾತ್ರೆ ಹಮ್ಮಿಕೊಳ್ಳಲಾಗಿತ್ತು.
ಜಾತ್ರೆಯ ಪ್ರಯುಕ್ತ ಜಡಿ ಶಂಕರಲಿಂಗ ದೇವರ 38ನೇ ಮಹಾರಥೋತ್ಸವವಿತ್ತು. ಈ ವೇಳೆ ಕೆಲ ಭಕ್ತರು ಪಟಾಕಿ ಸಿಡಿಸಿದ್ದಾರೆ. ಪಟಾಕಿಯ ಕಿಡಿ ರಥಕ್ಕೆ ತಗುಲಿ, ರಥದ ಮೇಲ್ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರು ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದರು.
