ಬೀದರ್ : ಗಡಿ ಜಿಲ್ಲೆ ಬೀದರ್ನಲ್ಲಿ ಮತ್ತೊಂದು ಅಗ್ನಿ ಅವಘಡ ನಡೆದಿದ್ದು ಬೃಹತ್ ಗಾತ್ರದ ಆಲದ ಮರ ಹೊತ್ತಿ ಉರಿದಿದೆ. ಬೀದರ್ ತಾಲೂಕಿನ ನಂದಗಾಂವ್ ಗ್ರಾಮದಲ್ಲಿ ಘಟನೆ ಜರುಗಿದ್ದು, ಯಾರೋ ಕಿಡಿಗೇಡಿಗಳು ಬೃಹತ್ ಆಲದ ಮರಕ್ಕೆ ಬೆಂಕಿ ಹಚ್ಚಿರಬಹುದೆಂದು ಶಂಕಿಸಲಾಗಿದೆ.
ನೂರಾರು ವರ್ಷದ ಬೃಹತ್ ಆಲದ ಮರ ಧಗ ಧಗನೆ ಹೊತ್ತಿ ಉರಿಯುವುದನ್ನ ಕಂಡ ಗ್ರಾಮಸ್ಥರು ಅಗ್ನಿಶಾಮಕ ಸಿಬ್ಬಂದಿಗಳಿಗೆ ವಿಷಯ ತಿಳಿಸಿದ್ದಾರೆ.
ಯಾದಗಿರಿಯಲ್ಲೊಂದು ಲವ್ ಸೆಕ್ಸ್ ದೋಖಾ ಕೇಸ್ ; ನ್ಯಾಯಕ್ಕಾಗಿ ನೊಂದ ಮಹಿಳೆ ಕಣ್ಣೀರು
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಈ ಘಟನೆಯು ಜನವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.