ಬೆಂಗಳೂರು:- ದರ್ಶನ್ ಗ್ಯಾಂಗ್ನ ಮತ್ತೊಂದು ಪೈಶಾಚಿಕ ಕೃತ್ಯ ಬಯಲಿಗೆ ಬಂದಿದ್ದು, ರೇಣುಕಾಸ್ವಾಮಿಯ ಕಿವಿ ಕತ್ತರಿಸಿ, ಮನಬಂದಂತೆ ಹಲ್ಲೆ ಮಾಡಿರುವುದು ಬೆಳಕಿಗೆ ಬಂದಿದೆ.
ರೇಣುಕಾಸ್ವಾಮಿ ಮೇಲೆ ಡಿ ಬಾಸ್ ಗ್ಯಾಂಗ್ ಮನಸ್ಸಿಗ್ಗೆ ಬಂದ ರೀತಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಬೆನ್ನ ಮೇಲೆ ಬಾಸುಂಡೆ ಬರುವ ರೀತಿಯಲ್ಲಿ ರೇಣುಕಾಸ್ವಾಮಿಯನ್ನು ಥಳಿಸಲಾಗಿದೆ. ಕಿವಿ ಕತ್ತರಿಸಿ, ಕೈಗೆ ಕರೆಂಟ್ ಶಾಕ್ ಕೊಟ್ಟು ಕ್ರೂರವಾಗಿ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ
ಕೊಲೆಯಾದ 33 ವರ್ಷದ ಆಟೋ ಚಾಲಕ ರೇಣುಕಾಸ್ವಾಮಿ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದು, ಒಂದು ಕಿವಿ ಇಲ್ಲ. ಹಾಗೇ ರೇಣುಕಾಸ್ವಾಮಿಯ ಬಾಯಿಗೆ ಒದ್ದು ಛಿದ್ರ-ಛಿದ್ರಗೊಳಿಸಲಾಗಿದೆ. ಭೀಕರ ಹಲ್ಲೆಯ ಪರಿಣಾಮ ರೇಣುಕಾಸ್ವಾಮಿಯ ಸಾವು ಸಂಭವಿಸಿದೆ ಎಂಬ ಅಂಶ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಯಲಾಗಿದೆ. ದರ್ಶನ್ ಆ್ಯಂಡ್ ಗ್ಯಾಂಗ್ ರೇಣುಕಾಸ್ವಾಮಿ ಮೇಲೆ ರಾಕ್ಷರಂತೆ ದುಷ್ಕೃತ್ಯ ಎಸಗಿದ ಫೋಟೋಗಳು ಸಿಕ್ಕಿದೆ. ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ನೀಡಿ ಭೀಕರವಾಗಿ ಕೊಲೆ ಮಾಡಲಾಗಿದೆ.