ವಾಶಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುದ್ಧಪೀಡಿತ ಗಾಝಾ, ‘ಟ್ರಂಪ್ ಗಾಝಾ’ ಎಂಬ ಮಹಾನಗರವಾಗಿ ರೂಪಾಂತರಗೊಳ್ಳುವ ಕಾಲ್ಪನಿಕ ವಿಡಿಯೊ ತುಣಕೊಂದನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ವ್ಯಾಪಕ ಟೀಕೆಗೆ ಗುರಿಯಾಗಿದೆ.
ವೈಭವ, ವಿಚಿತ್ರ ದೃಶ್ಯ ಕಲ್ಪನೆ ಹಾಗೂ ಸ್ವಯಂ ವೈಭವೀಕರಣದ ಸಂಕೇತವನ್ನು ಹೊಂದಿರುವ ಈ ವಿಡಿಯೊ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಗಾಝಾ ಪ್ರಾಂತ್ಯದಲ್ಲಿ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿರುವ ಹೊತ್ತಿನಲ್ಲಿ ಇದು ಅಸೂಕ್ಷ್ಮ, ಆಕ್ಷೇಪಾರ್ಹ ಹಾಗೂ ಕಿವುಡುತನದ ಪರಮಾವಧಿ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ರ ಪೋಸ್ಟ್ ಅನ್ನು ತಮ್ಮ ಫೇಸ್ ಬುಕ್ ನಲ್ಲಿ ತೀವ್ರವಾಗಿ ಖಂಡಿಸಿರುವ ಖ್ಯಾತ ಪತ್ರಕರ್ತೆ ಫಾಯೆ ಡಿಸೋಜ, ಇದು ಜಾಗತಿಕ ನಾಯಕರೊಬ್ಬರ ಅಭೂತಪೂರ್ವ ಅಸಡ್ಡೆಯ ನಡವಳಿಕೆ ಎಂದು ಟೀಕಿಸಿದ್ದಾರೆ.
“ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ಕೃತಕ ಬುದ್ಧಿಮತ್ತೆ ಚಾಲಿತ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದು, ಆ ವಿಡಿಯೊದಲ್ಲಿ ಅವರ ಬಂಗಾರದ ಪ್ರತಿಮೆ, ಆಕಾಶದಿಂದ ಉದುರುವ ಹಣ ಹಾಗೂ ಗಡ್ಡಧಾರಿ ಬೆಲ್ಲಿ ನರ್ತಕರೊಂದಿಗೆ ತೋರಿಸಲಾಗಿದೆ. ಸದ್ಯ ಈ ವಿಡಿಯೋ ವ್ಯಾಪಕ ಟೀಕೆಗೆ ಗುರಿಯಾಗಿದೆ.