ರಾಯಚೂರು:– ಸಂವಿಧಾನ ಬದಲಿಸುತ್ತೇವೆ ಎಂಬ ಅನಂತಕುಮಾರ್ ಹೆಗಡೆ ಅವರ ಹೇಳಿಕೆ ವೈಯಕ್ತಿಕವಾದದ್ದು ಎಂದು ಶ್ರೀ ರಾಮುಲು ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಹೆಗಡೆಯವರ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ಮುಖ್ಯಮಂತ್ತಿ ಸಿದ್ದರಾಮಯ್ಯನವರು ಜನರ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಯಾಕೆಂದರೆ ದೇಶದ ಪ್ರಧಾನ ಮಂತ್ರಿಯಾಗಿರುವ ನರೇಂದ್ರ ಮೋದಿಯವರು ಸಂವಿಧಾನ ಮತ್ತು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಎಷ್ಟು ಗೌರವಿಸುತ್ತಾರೆ ಅಂತ ಎಲ್ಲರಿಗೂ ಗೊತ್ತಿದೆ, ಬಿಜೆಪಿ ನಾಯಕರಿಗೆ ಸಂವಿಧಾನವು ಭಗವದ್ಗೀತೆಯಷ್ಟೇ ಪವಿತ್ರವಾಗಿದೆ ಎಂದು ಶ್ರೀ ರಾಮುಲು ಹೇಳಿದರು.
ಲೋಕಸಭಾ ಚುನಾವಣೆಗೆ ಬಳ್ಳಾರಿ ಕ್ಷೇತ್ರದ ಟಿಕೆಟ್ ನಿಮಗೆ ಸಿಗಲಿದೆಯೇ ಅಂತ ಕೇಳಿದಾಗ ಅವರು, ವಿಷಯ ಹಾಗಲ್ಲ; ಬಳ್ಳಾರಿಯಿಂದ ಮೂರು ಹೆಸರುಗಳನ್ನು ಕಳಿಸಲಾಗಿದೆ ಅದರಲ್ಲಿ ತನ್ನದೂ ಹೆಸರು ಸೇರಿದೆ, ಟಿಕೆಟ್ ಸಿಗುತ್ತೋ ಬಿಡುತ್ತೋ ಸೆಕಂಡರಿ, ಅದು ಯಾರಿಗೇ ಸಿಕ್ಕರೂ ಪಕ್ಷಕ್ಕಾಗಿ ಮತ್ತು ದೇಶಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.