ಬೆಂಗಳೂರು:- 6 ನಾಯಿಮರಿಗಳ ಸಾವಿಗೆ ಕಾರಣ ಆರೋಪ ಹೊತ್ತ ವೃದ್ಧೆಗೆ ದಂಡ ಹೆಚ್ಚಿಸಲು ಕೋರಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ
ಮಹಿಳೆಯ ಮನೆ ಮುಂದೆ ಬೀದಿನಾಯಿ 8 ಮರಿ ಹಾಕಿತ್ತು. ನಾಯಿಗಳ ಶಬ್ದ ಸಹಿಸದೇ ಮಹಿಳೆ ಮರಿಗಳನ್ನು ಬೇರೆಡೆ ಬಿಟ್ಟಿದ್ದರು. ತಾಯಿಯಿಂದ ದೂರವಾದ ನಾಯಿಮರಿಗಳು ಆಹಾರವಿಲ್ಲದೇ ಮೃತಪಟ್ಟಿದ್ದವು.
ಈ ಹಿನ್ನೆಲೆಯಲ್ಲಿ ಪೊನ್ನಮ್ಮ ವಿರುದ್ಧ ಪ್ರಾಣಿ ಕಲ್ಯಾಣ ಅಧಿಕಾರಿ ಹೆಚ್.ಬಿ.ಹರೀಶ್ ಕೇಸ್ ದಾಖಲಿಸಿದ್ದರು. ಪ್ರಾಣಿಗಳ ಮೇಲೆ ಕ್ರೌರ್ಯ ತಡೆ ಕಾಯ್ದೆಯಡಿ ಕೇಸ್ ದಾಖಲಾಗಿತ್ತು. ಕೋರ್ಟ್ನಲ್ಲಿ ತಪ್ಪೊಪ್ಪಿಕೊಂಡ ಮಹಿಳೆಗೆ ಮ್ಯಾಜಿಸ್ಟ್ರೇಟ್ ಕೋರ್ಟ್ 1 ಸಾವಿರ ರೂ. ದಂಡ ವಿಧಿಸಿ ಬಿಡುಗಡೆ ಮಾಡಿತ್ತು. ಶಿಕ್ಷೆ ಹೆಚ್ಚಳ ಕೋರಿ ದೂರುದಾರರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅಪರಾಧಿಗೆ ದಂಡ ಹೆಚ್ಚಳಕ್ಕೆ ನ್ಯಾಯಮೂರ್ತಿ ಜೆ.ಎಂ.ಖಾಜಿ ನಕಾರವೆತ್ತಿದ್ದಾರೆ ಎನ್ನಲಾಗಿದೆ.