ಬೆಂಗಳೂರು: ಕೆಲಸಕ್ಕೆಂದು ಸೇರಿ ಅಂಗಡಿಯಲ್ಲೇ ಬರೋಬ್ಬರಿ 30 ಲಕ್ಷ ಹಣ ಕದ್ದು ಆರೋಪಿ ಎಸ್ಕೇಪ್ ಆಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ನಗರದ ಬಿವಿಕೆ ಐಯ್ಯಂಗಾರ್ ರಸ್ತೆಯ ಎಲೆಕ್ಟ್ರಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಗಣೇಶ್, ಮಾಲೀಕ ಇಲ್ಲದ ಸಮಯದಲ್ಲಿ ಹಣ ಕದ್ದು ಪರಾರಿ ಆಗಿದ್ದಾನೆ. ಅಲ್ಲದೇ ಈತ ರಾಜಸ್ಥಾನ ಮೂಲದವನು ಎಂದು ಹೇಳಲಾಗಿದ್ದು, ಈ ಸಂಬಂಧ ಅಂಗಡಿ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಯ ಶೋಧ ಕಾರ್ಯ ಮುಂದುವರೆಸಿದ್ದಾರೆ ಎಂದು ಹೇಳಲಾಗಿದೆ.
