ರಾಯಚೂರು:- ಎಂಪಿ ಚುನಾವಣೆಯ ಉದ್ದೇಶದಿಂದ ನಗರ ಬಿಜೆಪಿ ಶಾಸಕರ ವಿರುದ್ಧ ಕೋಮುಗಲಭೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ
ಅಲ್ಲಾವುದ್ದೀನ್ ದರ್ಗಾದ ಹತ್ತಿರ ಸ್ವಾಗತಕಮಾನಗೆ ಟೆಂಡರ್ 15ನೇ ಹಣಕಾಸು ಯೋಜನೆ ಅಡಿಯಲ್ಲಿ ನಗರಸಭೆಯಿಂದ ಟೆಂಡರ್ ಕರೆಯಲಾಗಿತ್ತು. ಬಳಿಕ ಕಾಮಗಾರಿ ನಡಿತಿರುವ ವೇಳೆ ಅರ್ಧಕ್ಕೆ ನಿಂತಿಿದ್ದು, ಕೆಲಸ ನಿಲ್ಲಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಮುಸ್ಲಿಂ ಯುವಕರು ಗರಂ ಆಗಿದ್ದಾರೆ.
ಅಲ್ಲಾಹು ಅಕ್ಬರ್,ಜೈ ಶ್ರೀ ರಾಮ್ ಪರಸ್ಪರ ಘೋಷಣೆ ಕೂಗಿ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ. ಬಿಜೆಪಿಯ ನಗರ ಶಾಸಕ ಶಿವರಾಜ್ ಪಾಟೀಲ್ ವಿರುದ್ಧ ಕಾಂಗ್ರೆಸ್ ಮುಖಂಡ ಬಸಿರುದ್ದೀನ್ ಫುಲ್ ಗರಂ ಆಗಿದ್ದಾರೆ ಬಿಜೆಪಿಯವರು ನಡಿತಿರುವ ಕಾಮಗಾರಿ ತಡೆಗಟ್ಟಿ ಗುಂಡಾಗಿರಿ ಮಾಡುತ್ತಿದ್ದಾರೆ.
ನಗರ ಶಾಸಕರು ಇಂತಹ ನೀಚ ಕೆಲಸಕ್ಕೆ ಕೈ ಹಾಕಬಾರದು ಶಾಂತಿ ಸೌಹಾರ್ತೆ ಕಾಪಾಡುವ ಒಬ್ಬ ಜನಪ್ರತಿನಿಧಿಯ ಕೆಲಸ. ತಾವೇ ಮುಂದೆ ಬಂದು ಕೋಮುಗಲಭೆ ಸೃಷ್ಟಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಗರಂ ಆಗಿದ್ದಾರೆ.
ಲೋಕಸಭಾ ಚುನಾವಣೆ ಹತ್ತಿರ ಬಂದಿರುವುದರಿಂದ ಜಗಳ ಹಚ್ಚುವ ಬೆಂಕಿ ಹಚ್ಚುವ ಕೆಲಸ ಬಿಜೆಪಿ ಮಾಡುತ್ತೆ. ಇದು ಹ*** ಕೆಲಸಕ್ಕೆ ನಗರ ಶಾಸಕರು ಕೈ ಹಾಕಿದ್ದಾರೆ ಅದು ನಡಿಯಲ್ಲ ಎಂದು ಗರಂ ಆಗಿದ್ದಾರೆ.