ಧಾರವಾಡ: ವಿಶ್ವ ಕಪ್ ಆರಂಭದಿಂದಲ್ಲೂ ಗೆಲ್ಲುತ್ತಾಲೇ ಬಂದಿರುವ ಭಾರತ ತಂಡ ಈ ಬಾರಿ ವಿಶ್ವ ಕಪನಲ್ಲಿ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ತಂಡವಾಗಿದ್ದು, ನಮ್ಮೆಲ್ಲರಿಗೂ ಹೆಮ್ಮೆ. ನಾಳೆ ಫೈನಲ್ ಪಂದ್ಯ ನಡೆಯುತ್ತಿದ್ದು, ಅಲ್ಲಿಯು ವಿಜಯದ ಹಾರ ನಮ್ಮ ತಂಡಕ್ಕೆ ಸಿಗಲಿ. ಗೆದ್ದು ಬಾ ಭಾರತ ಎಂದು ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆಯ ಮಾಜಿ ಮೇಯರ್ ವೀರೇಶ ಅಂಚಟಗೇರಿಯವರು ಶುಭ ಹಾರೈಸಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಹ್ಮದಾಬಾದ್ನಲ್ಲಿ ನಾಳೆ ವಿಶ್ವ ಕಪ್ ಫೈನಲ್ ಪಂದ್ಯ ನಡೆಯಿತ್ತಿದ್ದು,
ಅಲ್ಲಿಯು ಕೂಡಾ ಭಾರತ ತಂಡ ಗೆದ್ದು ಬರಲಿ. ಹುಬ್ಬಳ್ಳಿ ಧಾರವಾಡ ಅವಳಿ ನಗರದ ಕ್ರಿಕೆಟ್ ಪ್ರೇಮಿಗಳ ಪರವಾಗಿ ಹಾಗೂ ಜನತೆಯ ಪರವಾಗಿ ಶುಭವಾಗಲಿ. ಹ್ಯಾಟ್ರಿಕ್ ವಿಶ್ವಕಪ್ ಗೆಲ್ಲುವು ನಮ್ಮ ದೇಶದ ತಂಡದಾಗಲಿ. ರೋಹಿತ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಈಗಾಗಲೇ ಎಲ್ಲ ಪಂದ್ಯಗಳಲ್ಲಿಯು ಉತ್ತಮವಾಗಿ ತಂಡ ಆಡುತ್ತಿದೆ. ಟೀಂ ಇಂಡಿಯಾದ ತಂಡದಲ್ಲಿರುವ ಪ್ರತಿಯೊಬ್ಬರು ಉತ್ತಮವಾಗಿ ಆಡುತ್ತಿದ್ದಾರೆ. ಅಚ್ಚುಕಟ್ಟಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಅದೇ ರೀತಿ ಪೈನ್ಲ್ ಪಂದ್ಯದಲ್ಲೂ ಅದೂ ಕಾಣುತ್ತದೆ. ಈ ಬಾರಿ ವಿಶ್ವ ಕಪ್ ಗೆಲ್ಲುವ ಫೇವರಿಟ್ ತಂಡ ಭಾರತವಾಗಿದೆ. ಹಾಗಾಗಿ ಈ ವಿಶ್ವ ಕಪ್ ಆಡುತ್ತಿರುವ ಪ್ರತಿಯೊಬ್ಬ ತಂಡ ಪ್ಲೇಯರ್ಗೆ ಶುಭವಾಗಲಿ ಎಂದು ಹೇಳಿದರು.


