ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಬಿಜೆಪಿ (BJP) ನೀರಿನಲ್ಲೂ ರಾಜಕೀಯ ಮಾಡ್ತಿದೆ ಅಂತ ಡಿಸಿಎಂ ಡಿ.ಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಕೆಲ ಹೋಟೆಲ್ʼಗಳಿಗೆ ತಟ್ಟಿದ ನೀರಿನ ಬರೆ: ಪ್ಲಾಸ್ಟಿಕ್ ತಟ್ಟೆಯಲ್ಲಿ ಊಟ ತಿಂಡಿ ನೀಡಲು ನಿರ್ಧಾರ!
ಬೆಂಗಳೂರಿನ ನೀರಿನ ಸಮಸ್ಯೆ ವಿಚಾರಕ್ಕೆ ವಿಧಾನಸೌಧದಲ್ಲಿ (Vidhana Soudha) ಮಾತನಾಡಿದ ಅವರು, 30-40 ವರ್ಷಗಳಿಂದ ಇಂತಹ ಬರ ಬಂದಿರಲಿಲ್ಲ. ಕಾವೇರಿ ನೀರು ಎಲ್ಲಿ ಒದಗಿಸಬೇಕೋ ಅಲ್ಲಿಗೆ ಒದಗಿಸಿಕೊಡ್ತೀವಿ. ನೀರಿನ ಟ್ಯಾಂಕರ್ ಮೂಲಕ ನೀರು ಕೊಡುವ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಅವರು ರಾಜಕೀಯ ಮಾಡ್ತಿದ್ದಾರೆ. ರಾಜಕೀಯ ಮಾಡೋರು ಮಾಡಲಿ. ನಾವೇನು ಮಾಡಲು ಆಗಲ್ಲ ಅಂತ ಕಿಡಿಕಾರಿದರು.
ನೀರಿನಲ್ಲಿ ದಂಧೆ ನಡೆಯುತ್ತಿತ್ತು. ಇದಕ್ಕೆ ಕಡಿವಾಣ ಹಾಕಿದ್ದೇವೆ ದಂಧೆ ತಡೆಗೆ ಅಧಿಕಾರಿಗಳ ನೇಮಕ ಮಾಡಿದ್ದೇವೆ. ನೀರಿನ ಟ್ಯಾಂಕರ್ ಗೆ ದರ ನಿಗದಿ ಮಾಡಿದ್ದೇವೆ. ಕೆಲವು ಸ್ಲಂಗಳಿಗೆ ಉಚಿತ ನೀರು ಕೊಡ್ತಿದ್ದೇವೆ. ಅಪಾರ್ಟ್ ಮೆಂಟ್ ಗಳಲ್ಲಿ ಮಿತ ನೀರು ಬಳಕೆಗೆ ಸಭೆ ಮಾಡಿದ್ದೇವೆ. ಕಾವೇರಿ 5 ನೇ ಹಂತ ಯೋಜನೆಯಲ್ಲಿ ಮೇ ವೇಳೆ ನೀರು ಕೊಡುವ ಕೆಲಸ ಮಾಡ್ತೀವಿ ಎಂದರು.