ಬೆಂಗಳೂರು : ಫೆ.11ರಿಂದ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಇನ್ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶ ಆರಂಭವಾಗಲಿದೆ. 4 ದಿನಗಳ ಕಾಲ ನಡೆಯುವ ಸಮಾವೇಶವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ , ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ರಾಜ್ಯದ ಜಿಡಿಪಿ ಬೆಳವಣಿಗೆಗೆ ಈ ಸಮಾವೇಶ ಮಹತ್ತರ ಕೊಡುಗೆ ನೀಡಲಿದೆ, ಪ್ಯಾಲೇಸ್ ಗ್ರೌಂಡ್ ನಲ್ಲಿ ಅಂತಿಮ ಹಂತದ ಸಿದ್ಧತೆಗಳು ಪೂರ್ಣಗೊಂಡಿದ್ದು, ಕೈಗಾರಿಕಾ ಸಚಿವ ಎಂಬಿ ಪಾಟೀಲ್, ಡಿಸಿಎಂ ಡಿಕೆ ಶಿವಕುಮಾರ್ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.
ಈ ವೇಳೆ ಮಾತನಾಡಿದ ಎಂಬಿ ಪಾಟೀಲ್ ಬಂಡವಾಳ ಸಮಾವೇಶಕ್ಕೆ ಸಂಪೂರ್ಣವಾಗಿ ತಯಾರಿ ಆಗಿದೆ. ಸವಾಲು ಎದುರಿಸುವ ನಿಟ್ಟಿನಲ್ಲಿ ಈ ಬಾರಿಯ ಸಮಾವೇಶ ನಡೆಯಲಿದೆ. AI ಈ ಬಾರಿ ಬಿಗ್ ರೋಲ್ ಪ್ಲೇ ಮಾಡಲಿದೆ, ಇವಿ, ಗ್ರೀನ್ ಎನರ್ಜಿ, ಹೈಡ್ರೋಜನ್ ಸೇರಿ ಹೊಸ ಹೊಸ ವಲಯ ಆಕರ್ಷಣೆ ಆಗಲಿದೆ. ಪ್ರಗತಿಯ ಮರು ಕಲ್ಪನೆ ಹೆಸರಿನಲ್ಲಿ ಬಂಡವಾಳ ಸಮಾವೇಶ ನಡೆಯುತ್ತಿದೆ ನಾಳೆ ಸಂಜೆ 4.15 ರಿಂದ 4.30 ರವರೆಗೆ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಯಿಂದಲೇ ಸೆಮಿನಾರ್, ವಿಶೇಷ ಸೆಷನ್ ಗಳು ನಡೆಯಲಿವೆ. ದಾವೋಸ್ ಸಮಾವೇಶದ ಹತ್ತಿರಕ್ಕೆ ನಮ್ಮ ಬಂಡವಾಳ ಸಮಾವೇಶ ಬರಲಿದೆ, 10 ಲಕ್ಷ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆ ಬರ್ತಿದೆ. ಬೇರೆ ದೇಶಕ್ಕೂ ಮಾದರಿಯಾಗಿ ರೋಡ್ ಮ್ಯಾಪ್ ನಾವು ಹಾಕಿಕೊಂಡಿದ್ದೇವೆ ಎಂದರು