ಹುಬ್ಬಳ್ಳಿ;- ಜಿಲ್ಲೆಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಕೇವಲ ಒಂದೇ ದಿನ ಬಾಕಿ ಇದೆ. ಈ ವರೆಗೂ ಶತಾಯ ಗತಾಯ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡ್ಲೇಬೇಕು ಎಂಬ ಹಠ ಹಿಡಿದು ಕೊನೆಗೂ ಜಯ ಗಳಿಸಿದ ಹಿಂದೂ ಸಂಘಟನೆಗಳು ನಾಳೆ ಈ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಕಲ ತಯಾರಿ ನಡೆಸಿವೆ. ಮೈದಾನದಲ್ಲಿ ಯಾವೆಲ್ಲ ತಯಾರಿ ನಡೆದಿದೆ ಅನ್ನೋದು ತೋರಿಸ್ತೀವಿ ನೋಡಿ…..
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿಗಣೇಶ ಪ್ರತಿಷ್ಠಾಪನೆಗೆ ಈಗಾಗಲೇ ಪರವಾನಗಿ ದೊರೆತಿದೆ. ಅಲ್ದೇ ಪ್ರತಿಷ್ಠಾಪನೆಗೆ ಒಂದೇ ದಿನ ಬಾಕಿಇದೆ. ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳು ಇಂದು ಪ್ರತಿಷ್ಠಾಪನೆಗೂ ಮುನ್ನ ಮೈದಾನದಲ್ಲಿ ಹಂದರಗಂಬ ಪೂಜೆ ಸಲ್ಲಿಸುವ ಮೂಲಕ ಪ್ರತಿಷ್ಠಾಪನಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ರು. ನಾಳೆ ನೆರವೇರಲಿರುವ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಸಕಲಸಿದ್ಧತೆಗಳನ್ನ ಕೈಗೊಂಡಿರೋ ಹಿಂದೂ ಸಂಘಟನೆಗಳು ಈಗಾಗಲೇ ಮೈದಾನದಲ್ಲಿ ವೇಳೆ ಶೇಷ ಪೂಜೆ ಸಲ್ಲಿಸುವ ಮೂಲಕ ಮಂಟಪ ನುರ್ಮಾಣ ಕಾರ್ಯಗಳನ್ನ ಭರದಿಂದ ನಡೆಸಿವೆ.ಅಲ್ದೇ ನಾಳೆ ಬೆಳಿಗ್ಗೆಯಿಂದ ಅತ್ಯಂತ ವಿಜೃಂಭಣೆಯಿಂದ ಗಣೇಶ ಹಬ್ಬವನ್ನ ಆಚರಣೆ ಮಾಡಲಿದ್ದು, ನಾಳೆಯಿಂದ ಮೂರು ದಿನಗಳಕಾಲ ಈಮೈದಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿ.

ಇನ್ನು ನಾಳೆ ಬೆಳಿಗ್ಗೆ 9.30 ಕ್ಕೆ ನಗರದ ಮೂರು ಸಾವಿರ ಮಠದಿಂದ ವಿಜೃಂಭಸೆಯ ಮೆರವಣಿಗೆ ಮೂಲಕ ಗಣೇಶನನ್ಬ ಈದ್ಗಾ ಮೈದಾನಕ್ಕೆ ಕರೆತರಲಿರೋ ಹಿಂದೂ ಮುಖಂಡರು ಸರಿಯಾಗಿ 10.30 ಕ್ಕೆ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಿದ್ದಾರೆ. ಅಲ್ದೇ ಪ್ರತಿಷ್ಠಾಪನೆ ನಂತರ ವಿಶೇಷ ಮಂಗಳಾರುತಿ, ಪೂಜೆ ನೆರವೇರಿಸಲಿದ್ದು, ಸಾರ್ವಜನಿಕರ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಿದ್ದಾರೆ.ಅಲ್ದೇ ಈದ್ಗಾ ಮೈದಾನದಲ್ಲಿ ಮೂರು ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದು, ಎಲ್ಲ ಧರ್ಮದ ಮುಖಂಡರಿಗೆ ಆಹ್ವಾನನೀಡಿದ್ದಾರೆ.
ಒಟ್ಟಾರೆ ಮೂರು ದಿನಗಳ ಕಾಲ ಪಾಲಿಕೆಯಿಂದ ಅವಕಾಶ ಪಡೆದುಕೊಂಡಿರೋ ಈದ್ಗಾ ಮೈದಾನದ ಗಣೇಶ ಪತರತಿಷ್ಠಾಪನೆ ಶಾಂತಿ ಸೌಹಾರ್ದತೆಯಿಂದ ನೆರವೇರಲಿ ಅನ್ನೋದೇ ನಮ್ಮ ಆಶಯ.
