ಬೆಂಗಳೂರು: ಕರ್ನಾಟಕ ಬಂದ್ ಯಶಸ್ವಿ ಆಗಿ ಮುಗಿಯಲಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ 31 ರಂದು ಕರ್ನಾಟಕ ಬಂದ್ ಯಶಸ್ವಿಯಾಗಿ ಮುಗಿಯಲಿದೆ. ರಾಜ್ಯದ್ಯಂತ 1800 ಸಂಘಗಳು ಬೆಂಬಲ ನೀಡಿದ್ದು, ಕನ್ನಡಪರ ಜನಪರ ಸಂಘಟನೆಯು ಸಹಕರಿಸುವುದಾಗಿ ಹೇಳಿದೆ.
ಇನ್ನೂ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಬಹಿರಂಗವಾಗಿ ಬೆಂಬಲ ಸೂಚಿಸಿದ್ದು, ಇದು ಪ್ರತಿಷ್ಠೆಗಾಗಿ ಮಾಡುತ್ತಿರುವ ಬಂದ್ ಅಲ್ಲ, ಕನ್ನಡಿಗರಿಗಾಗಿ ಮಾಡುತ್ತಿರುವ ಹೋರಾಟ. ಮಹಾರಾಷ್ಟ್ರದ ಪುಂಡರು ನಮ್ಮ ಬಾವುಟಕ್ಕೆ ಅವಮಾನ ಮಾಡಿದ್ದು, ಹೀಗಾಗಿ ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧ ಮಾಡಲೇಬೇಕು ಎಂದು ಹೇಳಿದರು. ಇನ್ನೂ ಹೋಟೆಲ್ ಮಾಲೀಕರು, ಮದ್ಯದ ಮಾಲೀಕರು ನೈತಿಕ ಬೆಂಬಲ ಕೊಡುವುದಾಗಿ ಹೇಳಿದರು. ಇದೀಗ ಸರ್ಕಾರ ಶೇ 50 ರಷ್ಟು ಮಿತಿಯಲ್ಲಿ ನಡೆಸುವಂತೆ ಆದೇಶ ನೀಡಿದ್ದಾರೆ.

ಸರ್ಕಾರದ ಆದೇಶಕ್ಕೆ ಒಪ್ಪಿಗೆ ಕೊಟ್ಟವರು, ನಮಗೆ ಮಾತ್ರ ನೈತಿಕ ಬೆಂಬಲ ಅಂದಿದ್ದಾರೆ. ಹೀಗಾಗಿ ನಮಗೆ ನೈತಿಕ ಬೆಂಬಲ ಬೇಡ. ಸರ್ಕಾರಿ ನೌಕರರು, ಪೆಟ್ರೋಲ್ ಬಂಕ್ ಮಾಲೀಕರು, ಬಸ್ ಮಾಲೀಕರು ಬಂದ್ ಮಾಡಲೇ ಬೇಕು. ಇನ್ನೂ ಬಂದ್ ದಿನ ಸಿನಿಮಾಗಳನ್ನು ನೋಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ವಾಟಾಳ್ ನಾಗರಾಜ್ ಖಡಕ್ಕಾಗಿ ಸೂಚನೆ ಕೊಟ್ಟಿದ್ದಾರೆ.
