ಬೆಂಗಳೂರು: ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆ, ಇಂದಿನಿಂದ ಬೆಂಗಳೂರು ನಗರದ ಎಲ್ಲಾ ಫ್ಲೈ ಓವರ್ ಗಳು ಬಂದ್ ಆಗಲಿವೆ. ಓಮಿಕ್ರಾನ್ ಭೀತಿ ಹಿನ್ನೆಲೆ, ರಾಜ್ಯದಲ್ಲಿ ನಿನ್ನೆಯಿಂದ ನೈಟ್ ಕರ್ಫ್ಯೂ ಜಾರಿ ಆಗಿದ್ದು, ಸಿಲಿಕಾನ್ ಸಿಟಿಯಲ್ಲಿ ಅರ್ಧಂಬರ್ಧ ಕರ್ಫ್ಯೂ ಜಾರಿ ಆಗಿದೆ ಎಂದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಾತ್ರಿ 10 ಗಂಟೆಯ ನಂತರವೂ ಆಟೋ, ಟ್ಯಾಕ್ಸಿ, ಬೈಕ್ ಗಳು ಎಂದಿನಂತೆ ಓಡಾಡುತ್ತಿದ್ದರು.
ಆದರೆ ಬ್ರೀಗ್ರೇಡ್ ರಸ್ತೆ, ಎಂಜಿ ರಸ್ತೆ, ಇಂದಿರಾ ನಗರ ಸಂಪೂರ್ಣ ಸ್ತಬ್ಧವಾಗಿದ್ದು, ಮೋಜು ಮಸ್ತಿಗೆ ಬ್ರೇಕ್ ಹಾಕಿದ್ದರು. ಇನ್ನೂ ಮೊದಲ ದಿನ ಅಂತ ನಿನ್ನೆಯ ಕರ್ಫ್ಯೂ ನಲ್ಲಿ ರಿಲೀಫ್ ಕೊಟ್ಟಿದ್ದು, ಇಂದಿನಿಂದ ನಿಯಮಗಳು ಬಿಗಿಗೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಇಂದು 9 ಗಂಟೆಯ ನಂತರ ನಗರದ ಎಲ್ಲಾ ಫ್ಲೈ ಓವರ್ ಗಳು ಬಂದ್ ಆಗಲಿವೆ ಎಂದು ಹೇಳಲಾಗಿದೆ.
