ಬೆಂಗಳೂರು: ನಿರ್ಮಾಪಕರಿಂದ ಅವಮಾನ ಆಗಿದೆ ಎಂಬ ಅಜಯ್ ರಾವ್ ಹೇಳಿಕೆಗೆ ಸ್ವತಹ ನಿರ್ಮಾಪಕರೇ ಇಂದು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ನಿರ್ಮಾಪಕ ಗುರು ದೇಶಪಾಂಡೆ ಅವರು, ಒಂದು ತಂಡ ಎಂದಮೇಲೆ ಸಣ್ಣ-ಪುಟ್ಟ ಜಗಳಗಳು ಬರುವುದು ಸಾಮಾನ್ಯ. ನಾಲ್ಕು ಜನರಿರುವ ಕುಟುಂಬದಲ್ಲಿಯೇ ಸಮಸ್ಯೆ ಬಂದಮೇಲೆ,
150 ಕ್ಕೂ ಹೆಚ್ಚು ಜನರಿರುವ ತಂಡದಲ್ಲಿ ಮನಸ್ತಾಪ ಬರುವುದಿಲ್ಲವೇ, ಅದನ್ನು ದೊಡ್ಡದು ಮಾಡುವ ಅವಶ್ಯಕತೆ ಏನಿದೆ ? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಲು ನಾನು ಸಿದ್ಧವಿದ್ದೇನೆ. ಈ ಸಂಬಂಧ ಅಜಯ್ ರಾವ್ ಅವರಿಗೆ ಕರೆ ಮಾಡಿ ಮಾತಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು.
