Ain Live News
    Facebook Twitter Instagram YouTube
    ಕನ್ನಡ English తెలుగు
    Wednesday, June 7
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ಶ್ರವಣಬೆಳಗೊಳದ ದಿಗಂಬರ ಜೈನ ಮಠದ ಪೀಠಾಧ್ಯಕ್ಷರಾಗಿ ಆಗಮಕೀರ್ತಿ ಭಟ್ಟಾರಕ ಸ್ವಾಮೀಜಿ ಪೀಠಾರೋಹಣ

    ain userBy ain userMarch 28, 2023
    Agamakirti Bhattarak Swamiji enthroned
    Share
    Facebook Twitter LinkedIn Pinterest Email

    ಶ್ರವಣಬೆಳಗೊಳ: ಜೈನಕಾಶಿ ಎಂದೇ ಕರೆಯಲ್ಪಡುವ ಶ್ರವಣಬೆಳಗೊಳದ ದಿಗಂಬರ ಜೈನ ಮಠದ ಪೀಠಾಧ್ಯಕ್ಷರಾಗಿ ಆಗಮಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಸೋಮವಾರ ಪೀಠಾರೋಹಣ ಮಾಡಿದರು.

    ಜಿನೈಕ್ಯ ಶ್ರೀ ಕರ್ಮಯೋಗಿ ಸ್ವಸ್ತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಂದ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದ ಶಿವಮೊಗ್ಗ ಜಿಲ್ಲೆಯ ಸಾಗರದ ಆಗಮ ಇಂದ್ರ ಇಂದು ಆಗಮಕೀರ್ತಿಯಾಗಿ ಪಟ್ಟಾಭಿಷೇಕ ಮಹೋತ್ಸವ ನೆರವೇರಿಸಿಕೊಳ್ಳುವ ಮೂಲಕ ಶ್ರವಣಬೆಳಗೊಳದ ಜೈನಮಠದ ಪೀಠಾಧ್ಯಕ್ಷರಾಗಿ ಪಟ್ಟವನ್ನು ಅಲಂಕಾರ ಮಾಡಿದರು. ನೂತನ ಭಟ್ಟಾರಕ ಸ್ವಾಮೀಜಿಗೆ ಪಟ್ಟಾಭಿಷೇಕ ಮಹೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.

    Demo

    4 ತಿಂಗಳ ಹಿಂದೆ ಕ್ಷುಲ್ಲಕ ದೀಕ್ಷೆ

    ನಾಲ್ಕು ತಿಂಗಳ ಹಿಂದೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಆಗಮ ಇಂದ್ರ ಇವರಿಗೆ ಕ್ಷುಲ್ಲಕ ದೀಕ್ಷೆ ನೀಡುವ ಮೂಲಕ ಆಗಮಕೀರ್ತಿ ಎಂದು ನಾಮಕರಣ ಮಾಡಿದ್ದರು. ತಮ್ಮ ಮಠದಲ್ಲಿಯೇ ಅವರಿಗೆ ಆಶ್ರಯ ನೀಡಿ ಮಠದ ಪರಂಪರೆ, ಸಂಸ್ಕಾರ, ಕ್ಷೇತ್ರದ ಪರಿಚಯ ಮಾಡಿಸಿದ್ದರು. ಆದರೆ ಅಕಾಲಿಕ ಮರಣಕ್ಕೆ ಒಳಗಾದ ಭಟ್ಟಾರಕ ಸ್ವಾಮೀಜಿಯವರ ಉತ್ತರ ಅಧಿಕಾರಿ ಆಗಿದ್ದ ಆಗಮಕೀರ್ತಿ ಸ್ವಾಮೀಜಿ ಅವರಿಗೆ ಸೋಮವಾರ ಜೈನಮಠದ ಮತ್ತು ವಿವಿಧ ಭಟ್ಟಾರಕ ಸ್ವಾಮೀಜಿಗಳ ನೇತೃತ್ವದಲ್ಲಿ ಪಟ್ಟಾಭಿಷೇಕ ಮಹೋತ್ಸವ ಬಹಳ ವಿಜೃಂಭಣೆಯಿಂದ ನೆರವೇರುತ್ತಿದೆ.

    ಆಗಮ ಶ್ರೀಗಳ ಪರಿಚಯ

    ಶಿವಮೊಗ್ಗ ಜಿಲ್ಲೆ ಸಾಗರ ನಗರದ ಅಶೋಕ್ ಕುಮಾರ್ ಇಂದ್ರ ಮತ್ತು ಅನಿತಾ ಅಶೋಕ್ ಕುಮಾರ್ ದಂಪತಿಗಳ ಪುತ್ರ ಆಗಮ ಇಂದ್ರ. 2001ರ ಫೆಬ್ರವರಿ 26ರಂದು ಜನಿಸಿದರು. ಸಾಗರ ಪಟ್ಟಣದ ರೋಟರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಹಾಗೂ ಪ್ರೌಢ ಶಿಕ್ಷಣವನ್ನು ಎಂಜೆಎನ್ ಪೈ ಪ್ರೌಢಶಾಲೆಯಲ್ಲಿ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ, ಪದವಿ ಶಿಕ್ಷಣವನ್ನ ಎಲ್ ಬಿ ಮತ್ತು ಎಸ್ ಬಿ ಎಸ್ ಕಾಲೇಜು ಸಾಗರದಲ್ಲಿ ಪಡೆದಿದ್ದಾರೆ. ಬಳಿಕ ಪ್ರಶಿಕ್ಷಣ ತರಬೇತಿಯನ್ನು, ಎನ್‌ಸಿಸಿ ಕೆಡೆಟ್ ಬಿ ಮತ್ತು ಸಿ ಪ್ರಮಾಣ ಪತ್ರವನ್ನು ಪಡೆದಿರುತ್ತಾರೆ. ಗಣಕಯಂತ್ರ ತರಬೇತಿಯನ್ನು ಪಡೆದಿರುವ ಇವರು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯನ್ನು ಸುಲಲಿತವಾಗಿ ಮಾತನಾಡುತ್ತಾರೆ.

    ಹಿಂದಿನ ಶ್ರೀಗಳ ಉತ್ತರಾಧಿಕಾರಿಯಾಗಿ ಸೂಚಿಸಿದ್ದರು

    ಇವರ ತಂದೆ ಮೋಹನ್ ಕುಮಾರ್ ಅವರು ಪ್ರತಿಷ್ಠಾಚಾರ್ಯ ಕಾರ್ಯ ಮಾಡುತ್ತಿದ್ದು ಇವರ ಜೊತೆ ಆರಾಧನೆ ಇನ್ನಿತರ ಕಾರ್ಯಗಳಲ್ಲಿ ಭಾಗವಹಿಸಿ, ಧರ್ಮಪ್ರಚಾರದಲ್ಲೂ ಮುಂಚೂಣಿಯ ಪಾತ್ರ ವಹಿಸಿದ್ದಾರೆ. ಶ್ರವಣಬೆಳಗೊಳದ ಕರ್ಮಯೋಗಿ ಜಗದ್ಗುರು ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ನಿಧನರಾದ ಬಳಿಕ, ಇವರನ್ನೇ ಉತ್ತರಾಧಿಕಾರಿಯಾಗಿ ಮಾಡಬೇಕೆಂದು ಸ್ವಾಮೀಜಿ ಇಚ್ಛಾ ಮರಣ ಪತ್ರದಲ್ಲಿ ಬರೆದಿದ್ದರು.

    ಜೈನ ಮಠದ ಕಾರ್ಯಕಾರಿ ಸಮಿತಿ ತೀರ್ಮಾನದ ಪ್ರಕಾರ ರೋಹಿಣಿ ನಕ್ಷತ್ರದಲ್ಲಿ ಅಂದರೆ ಇಂದು (ಮಾ. 27, 2023) ರಂದು ಶ್ರವಣಬೆಳಗೂಳ ಭಂಡಾರ ಬಸದಿಯಲ್ಲಿ ಪಟ್ಟಾಭಿಷೇಕ ಮಹೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿದರು.

    Share. Facebook Twitter LinkedIn Email WhatsApp

    Related Posts

    Mahesh Tenginkai: ಕಾಂಗ್ರೆಸ್ ನವರು ಮನೆ ಒಡೆಯುವ ಕೆಲಸ ಮಾಡುತ್ತಿದ್ದಾರೆ: ಮಹೇಶ್ ಟೆಂಗಿನಕಾಯಿ

    June 7, 2023

    Dr. G. Parameshwara: ಪಠ್ಯಪರಿಷ್ಕರಣೆಗೆ ಬಗ್ಗೆ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಆಗಲ್ಲ: ಡಾ.ಜಿ. ಪರಮೇಶ್ವರ್

    June 7, 2023

    Soldiers: ಊಟ ಸೇವಿಸಿದ ಬಳಿಕ 35 ಮಂದಿ ಸೈನಿಕರು ಅಸ್ವಸ್ಥ..! ಆಸ್ಪತ್ರೆಗೆ ದಾಖಲು

    June 7, 2023

    ಸುಮಲತಾ ಅವರ ಧಾರವಾಡದ ವಿಶೇಷ ಅಭಿಮಾನಿಗೂ ಬಂತು ಅಭಿಷೇಕ್ ಆರತಕ್ಷತೆ ಆಮಂತ್ರಣ

    June 7, 2023

    BJP: ಭಜರಂಗದಳ ಬ್ಯಾನ್, ಗೋ ಹತ್ಯೆ ನಿಷೇಧ ಕಾಯಿದೆ ವಾಪಸ್ ವಿರೋಧಿಸಿ ಬಿಜೆಪಿ ಪ್ರತಿಭಟನೆ

    June 7, 2023

    MLC Vishwanath: ದೇವರಾಜ ಅರಸ್ ಪುಣ್ಯ ಸ್ಮರಣೆಯಲ್ಲಿ ಭಾಗಿಯಾದ ಎಂ.ಎಲ್.ಸಿ‌ ವಿಶ್ವನಾಥ್

    June 7, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.