ಗದಗ: ಲೋಕಸಭಾ ಚುನಾವಣೆ ಬಳಿಕ ಮತ್ತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೈಲಿಗೆ ಹೋಗೋದು ಫಿಕ್ಸ್ ಎಂದು ಡಿಕೆಶಿ ಕೇಸ್ ಗೆ ಈಶ್ವರಪ್ಪ ಮತ್ತೆ ಕೌಂಟರ್ ಕೊಟ್ಟಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು ಸಿಬಿಐ ತನಿಖೆ ಮುಂದುವರಿಸಲು ಅಭ್ಯಂತರ ಇಲ್ಲ ಎಂದು ಕೋರ್ಟ್ ಹೇಳಿದೆ. ಮೇಲ್ನೋಟಕ್ಕೆ ಡಿಕೆಶಿ ಅಕ್ರಮ ಹಣ ಸಂಪಾದನೆ ಮಾಡಿರೋದು ಬಹಿರಂಗ ಆಗಿದೆ. ನೂರಾರು ಕೋಟಿ ಹಣ ಸಿಕ್ಕಿರೋದು ಇಡೀ ರಾಜ್ಯದ ಜನ ನೋಡಿದ್ದಾರೆ. ಸಿಬಿಐ ತನಿಖೆ ಆಗಿದೆ, ಅವರು ಜೈಲಿಗೆ ಹೋಗೋದ್ರಲ್ಲಿ ಯಾವುದೇ ಸಂಶಯ ಇಲ್ಲ. ಲೋಕಸಭಾ ಚುನಾವಣೆ ಮುನ್ನ ಅಥವಾ ಚುನಾವಣೆಯ ಬಳಿಕ ಡಿಕೆಶಿ ಜೈಲಿಗೆ ಹೋಗೋದು ಖಚಿತ ಎಂದರು.
ಭ್ರೂಣ ಹತ್ಯೆ ಪ್ರಕರಣ ವಿಚಾರ: CID ತನಿಖೆಗೆ ಆದೇಶ ಮಾಡಿದ ರಾಜ್ಯ ಸರ್ಕಾರ
ಇಡಿ, ಸಿಬಿಐ ಇವೆಲ್ಲ ಸ್ವಾಯತ್ತ ಸಂಸ್ಥೆಗಳು ಹಾಗಾದ್ರೆ ಕಾಂಗ್ರೆಸ್ನಲ್ಲಿದ್ದು ಎಷ್ಟು ಬೇಕಾದರೂ ಲೂಟಿ ಮಾಡಬಹುದಾ… ಯಾವುದೇ ಕಾರಣಕ್ಕೂ ಕಾಂಗ್ರೆಸ್ ನವರ ಮುಟ್ಟಬಾರದು ಅಂತ ಇದೆಯಾ..? ಇಡೀ ದೇಶದಲ್ಲಿ ಸಿಬಿಐನವರು ಎಲ್ಲ ಪಕ್ಷದವರನ್ನ ಮುಟ್ಟಿದ್ದಾರೆ.
ಸಾವಿರಾರು ಕೋಟಿ ಸಿಗ್ತಾ ಇರೋದು ಕಾಂಗ್ರೆಸ್ ನಲ್ಲಿ ಡಿಕೆಶಿ ಮನೆಯಲ್ಲಿ ಸಿಬಿಐ ರೇಡ್ ಆದಾಗ ನೂರಾರು ಕೋಟಿ ಅಕ್ರಮ ದಾಖಲೆಗಳು ಸಿಕ್ತು ವಿಚಾರಣೆ ಮುಗಿದು ಚಾರ್ಜಶಿಟ್ ಹಾಕುವಂಥ ಸಂದರ್ಭ ಇತ್ತು ಆದರೂ ತಮ್ಮ ಕೈಯಲ್ಲಿ ಸರ್ಕಾರ ಇದೆ ಅಂತಾ, ಹೈಕಮಾಂಡ್ ಒತ್ತಡಕ್ಕೆ ಒಳಗಾದ್ರು ಹೈಕಮಾಂಡ್ ಕೈಗೊಂಬೆಯಾಗಿ ಡಿಕೇಶಿ ಮೇಲಿನ ಕೇಸನ್ನ ವಿತ್ ಡ್ರಾ ಮಾಡಿದರು ತಾತ್ಕಾಲಿಕ ರಿಲೀಫ್ ಅಷ್ಟೇ ಸಿಕ್ಕಿದೆ ಆದರೆ FIR ವಿತ್ಡ್ರಾ ಮಾಡಿಲ್ಲ ಎಂದು ಕಿಡಿ ಕಾರಿದರು.