ಬಾಗಲಕೋಟೆ ಜಿಲ್ಲೆಯ ರನ್ನ ಬೆಳಗಲಿ ಪಟ್ಟಣ ಪಂಚಾಯತ ಆಶ್ರಯದಲ್ಲಿ ರನ್ನ ಬೆಳಗಲಿಯ ಕನ್ನಡ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿನ ಮತಗಟ್ಟೆಗಳಾದ 01,03 ಮತ್ತು 4ನೇ ಹಾಗೂ 2ನೇ ಮತ ಗಟ್ಟೆಯಾದ ಗ್ರಾಮ ಚಾವಡಿಯನ್ನು ಲೋಕಸಭಾ ಚುನಾವಣೆ ಪ್ರಯುಕ್ತ ವರ್ಲಿ ಆರ್ಟ್ ಅಂದರೆ ದೇಶಿಯ ಚಿತ್ರಕಲೆಯ ಮೂಲಕ ಮತದಾರರನ್ನು ವಿನೂತನವಾಗಿ ಸೆಳೆಯುವ ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಟರಾದ ದಾನಪ್ಪ ಮೂಡಲಗಿ ಅವರು ಕುಂಚದಿಂದ ಬಣ್ಣ ಹಚ್ಚುವುದರ ಮೂಲಕ ಚಾಲನೆ ನೀಡಿದರು.
ಎಂ. ಎಸ್. ಸುತಾರ ಸೆಕ್ಟರ್ ಆಫೀಸರ್ ಅವರು ಸಾರ್ವಜನಿಕರನ್ನು ಮತಗಟ್ಟೆಗಳಿಗೆ ಸೆಳೆಯುವುದರ ಜೊತೆಗೆ ಅತ್ಯಂತ ಆಕರ್ಷಕವಾಗಿ ಚುನಾವಣೆಯ ಮಹತ್ವವನ್ನು ಸಾರುವ, ಚುನಾವಣೆಯಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು, ಚುನಾವಣೆ ಘೋಷ ವಾಕ್ಯಗಳ ಅರ್ಥವನ್ನು ತಿಳಿಸುವ, ದೇಶಿಯ ಚಿತ್ರಕಲೆಯ ಮೂಲಕ ಗೋಡೆಯ ಸಿಂಗಾರದೊಂದಿಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯವು ಅದ್ಭುತವಾಗಿ ಮೂಡಿಬಂದಿದೆ.ಈ ಒಂದು ದೇಶ ಚಿತ್ರಕಲೆಗೆ ಕೈಜೋಡಿಸಿದ ಸ್ಥಳೀಯ ಎಲ್ಲಾ ಚಿತ್ರಕಲಾ ಶಿಕ್ಷಕರಿಗೆ ಅಭಿನಂದನಾ ಮಾತುಗಳನ್ನು ಆಡುತ್ತಾ ಮತದಾನದ ಮಹತ್ವ ಕುರಿತು ಮಾತನಾಡಿದರು.
ಮಲ್ಲಿಕಾರ್ಜುನ ಅರಬಿ ಸಿ.ಆರ್.ಪಿ ಅವರು ರನ್ನ ಬೆಳಗಲಿ ಯಲ್ಲಿರುವ ಎಲ್ಲಾ ಮತಗಟ್ಟೆಗಳಿಗೆ ದೇಸಿ ಚಿತ್ರಕಲೆಯ ಮೂಲಕ ಮತದಾನದ ಜಾಗೃತಿ ಮೂಡಿಸುವುದರ ಜೊತೆಗೆ ವಿಶೇಷವಾಗಿ ಮಾತೆಯರ ಮತದಾನ ಕೇಂದ್ರಗಳಿಗೆ ಪಿಂಕ್ ಮತಗಟ್ಟೆಯೆಂದು ಕರೆಯುವುದರೊಂದಿಗೆ. ಗುಲಾಬಿ ಬಣ್ಣದೊಂದಿಗೆ ಮತಗಟ್ಟೆ ಅಲಂಕರಸಿ, ಹೆಣ್ಣು ಮಕ್ಕಳ ಮತದಾನದ ಜಾಗೃತಿ ಮೂಡಿಸುವ ಉದ್ದೇಶದಿಂದ ಮತದಾನದ ಮಹತ್ವವನ್ನು ಸಾರುವ ಗೋಡೆ ಬರಹದೊಂದಿಗೆ ದೇಶಿ ಚಿತ್ರಕಲೆಯ ಜೊತೆಗೆ ಸಿಂಗರಿಸಲು, ಸಕಲ ಸಿದ್ಧತೆ ನಡೆದಿದೆ.
ಈ ಒಂದು ದೇಶ ಚಿತ್ರಕಲೆಯನ್ನು ಮಕ್ಕಳಲ್ಲಿ ಕೂಡ ಕರಗತ ಮಾಡಿಸಬೇಕೆಂದು ಶಿಕ್ಷಕರಲ್ಲಿ ವಿನಂತಿಸುತ್ತಾ ತಮ್ಮ ವಿಚಾರವನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿಗಳಾದ ಬಿ.ಎಂ.ಪಾಟೀಲ, ಕೆ.ಜಿ.ಎಸ್ ಮುಖ್ಯೋಪಾಧ್ಯರಾದ ಎಸ್. ಎಲ್. ಕಠಾರಿ, ಚಿತ್ರಕಲಾ ಶಿಕ್ಷಕರಾದ ಬಿ.ಪಿ ಚೋಪಡೆ, ಆರ್. ಜಿ. ಕೊಣ್ಣೂರ, ಎಸ್. ಎಮ್. ವಿರಕ್ತಮಠ ಸಂಗೀತ ಶಿಕ್ಷಕಿಯರಾದ ಜೆ.ಎಸ್.ಮಾಳಗಿ ಇಂಗ್ಲಿಷ್ ಶಿಕ್ಷಕಿಯರಾದ ಎಸ್.ಎಂ. ಹಾರೂಗೇರಿ, ಪತ್ರಕರ್ತರಾದ ರಾಘವೇಂದ್ರ ನೀಲಣ್ಣವರ ಮತ್ತು ಗ್ರಾಮಸ್ಥರು ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು
ಪ್ರಕಾಶ ಕುಂಬಾರ
ಬಾಗಲಕೋಟೆ