ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಸಾಕಷ್ಟು ವಿವಾದದ ನಡೆವೆಯೂ ತೆರೆಗೆ ಬಂದು ಮೊದಲ ದಿನ ಅಚ್ಚರಿಯ ಕಲೆಕ್ಷನ್ ಮಾಡಿತ್ತು. ಆದರೆ ದಿನ ಕಳೆದಂತೆ ಪ್ರೇಕ್ಷಕರು ಥಿಯೇಟರ್ ಗೆ ಬರೋಕೆ ಹಿಂದೇಟು ಹಾಕಲು ಶುರು ಮಾಡಿದರು. ಈ ಹಿನ್ನೆಲೆಯಲ್ಲಿ ಸಿನಿಮಾ ರಿಲೀಸ್ ಆದ ನಾಲ್ಕೇ ನಾಲ್ಕು ದಿನಕ್ಕೆ ಚಿತ್ರತಂಡ ಟಿಕೆಟ್ ದರವನ್ನು ಕಮ್ಮಿ ಮಾಡಿ ಫ್ಯಾಮಿಲಿ ಆಡಿಯನ್ಸ್ ಗಳನ್ನು ಥಿಯೇಟರ್ ಗೆ ಕರೆತರುವ ಪ್ರಯತ್ನ ನಡೆಸಿತ್ತು. ಆದರೆ ಚಿತ್ರತಂಡದ ಈ ಫ್ಯ್ಲಾನ್ ಕೂಡ ವರ್ಕ್ ಔಟ್ ಆಗಿಲ್ಲ.
ಆದಿಪುರುಷ್ ಮೊದಲ ದಿನ ಭಾರತದಲ್ಲಿ 140 ಕೋಟಿ ರೂಪಾಯಿ ಬಾಚಿಕೊಂಡಿದ್ದ ಏಳನೇ ದಿನಕ್ಕೆ ಕೇವಲ 5.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ತೃಪ್ತಿಪಟ್ಟುಕೊಂಡಿದೆ. ಹೀಗಾಗಿ 150 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿತ್ತು. ಆದರೆ ಈ ಆಫರ್ ಕೊಟ್ಟರೂ ಜನರು ಸಿನಿಮಾ ನೋಡುತ್ತಿಲ್ಲ. ಈ ಬೆಳವಣಿಗೆಯಿಂದ ಪ್ರಭಾಸ್ ಸಿನಿಮಾ ಅತೀ ಶೀಘ್ರದಲ್ಲೇ ಒಟಿಟಿಗೆ ಕಾಲಿಡಲಿದೆ ಎಂಬುದು ಬಹುತೇಕ ಖಚಿತವಾಗಿದೆ.

‘ಆದಿಪುರುಷ್’ ಸಿನಿಮಾ ವಿಶ್ವಮಟ್ಟದಲ್ಲಿ 400+ ಕೋಟಿ ರೂಪಾಯಿ ಗಳಿಸಿದೆ. ಭಾರತದಲ್ಲಿ ಎಲ್ಲಾ ಭಾಷೆಗಳಿಂದ ಈ ಚಿತ್ರ ಗಳಿಕೆ ಮಾಡಿದ್ದು 250+ ಕೋಟಿ ರೂಪಾಯಿ. ಜೂನ್ 22ರಂದು 5.5 ಕೋಟಿ ರೂಪಾಯಿಗೆ ತೃಪ್ತಿಪಟ್ಟುಕೊಂಡಿದೆ. ಇದೀಗ ವೀಕೆಂಡ್ ಬಂದಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರು ಥಿಯೇಟರ್ ಗೆ ಹೋಗ್ತಾರೆ ಕಾದು ನೋಡಬೇಕಾಗಿದೆ. ಗುರುವಾರ ಮಲ್ಟಿಪ್ಲೆಕ್ಸ್ಗಳಲ್ಲಿ 150 ರೂಪಾಯಿಗೆ ಟಿಕೆಟ್ ಬೆಲೆ ಇಳಿಸಲಾಗಿತ್ತು. ಐನಾಕ್ಸ್, ಪಿವಿಆರ್ ಮೊದಲಾದ ಕಡೆಗಳಲ್ಲಿ ಈ ಆಫರ್ ಇತ್ತು. ಇಷ್ಟೇ ಅಲ್ಲದೆ ಸಿನಿಮಾದ ವಿವಾದಾತ್ಮಕ ಡೈಲಾಗ್ಗಳನ್ನು ಬದಲಿಸಲಾಗಿದೆ. ಆದಾಗ್ಯೂ ಜನರು ಸಿನಿಮಾ ನೋಡಲು ಬರುತ್ತಿಲ್ಲ. ಇದು ಚಿತ್ರತಂಡಕ್ಕೆ ಹಿನ್ನಡೆ ಆಗಿದೆ. ಅಲ್ಲದೆ ನಾಳೆಯಿಂದ ಮತ್ತೆ ಚಿತ್ರತಂಡ ಟಿಕೇಟ್ ದರವನ್ನು ಏರಿಸುತ್ತಿದ್ದು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಕಲೆಕ್ಷನ್ ಮಾಡಲಿದೆ ಎಂಬುದು ಕುತೂಹಲ ಕೆರಳಿಸಿದೆ.
