ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿ ನಂತರ ಬಾಲಿವುಡ್ಗೆ ಕಾಲಿಟ್ಟು ಯಶಸ್ಸು ಕಂಡ ಸಾಕಷ್ಟು ನಟಿಯರಿದ್ದಾರೆ. ಪೂಜಾ ಹೆಗ್ಡೆ ಮಂಗ ಳೂರು ಮೂಲದವರು. ಅವರು ಬಾಲಿವುಡ್ನಲ್ಲಿ ನೆಲೆಕಂಡುಕೊಂಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಅವರು ಒಳ್ಳೆಯ ಬೇಡಿಕೆ ಇಟ್ಟುಕೊಂ ಡಿದ್ದಾರೆ. ದಕ್ಷಿಣದಲ್ಲಿ ದೊಡ್ಡ ಮಟ್ಟದಲ್ಲಿ ಮಿಂಚಿರುವ ರಶ್ಮಿಕಾ ಮಂದಣ್ಣ ಬಾಲಿವುಡ್ನಲ್ಲಿ ಖಾತೆ ತೆರೆದಿದ್ದಾರೆ. ಇನ್ನು, ಬಾಲಿವುಡ್ನಲ್ಲಿ ಅದೃಷ್ಟಪರೀಕ್ಷೆಗೆ ಮುಂದಾಗಿ ಸೋತವರ ಸಂಖ್ಯೆ ಕೂಡ ದೊಡ್ಡದಿದೆ.
ಈಗ ಸಾಯಿ ಪಲ್ಲವಿ ಕೂಡ ಬಾಲಿವುಡ್ನಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅವರು ದಕ್ಷಿಣ ಭಾರತದಲ್ಲಿ ಭಾರೀ ಬೇಡಿಕೆ ಸೃಷ್ಟಿ ಮಾಡಿಕೊಂಡಿದ್ದಾರೆ. ಬಾಲಿವುಡ್ಗೆ ಹೋದರೆ ಅವರಿಗೆ ಗೆಲುವು ಪಕ್ಕಾ ಎನ್ನುವ ಅಭಿಪ್ರಾಯ ಅಭಿಮಾನಿ ವಲಯದಲ್ಲಿ ವ್ಯಕ್ತವಾಗಿದೆ. ಸಾಯಿ ಪಲ್ಲವಿ ಸಿನಿಮಾಗಳ ಆಯ್ಕೆ ವಿಚಾರದಲ್ಲಿ ಸಾಕಷ್ಟು ಚ್ಯೂಸಿ. ಅವರು ಸಿನಿಮಾ ಆಯ್ಕೆ ಮಾಡಿಕೊಳ್ಳುವುದಕ್ಕೂ ಮೊದಲು ಪಾತ್ರ, ಕಥೆ ಎಲ್ಲದಕ್ಕೂ ಪ್ರಾಮುಖ್ಯತೆ ಕೊಡುತ್ತಾರೆ.

ಈಗ ಬಾಲಿವುಡ್ಗೆ ಕಾಲಿಡೋಕು ಅವರು ಇದೇ ಮಾನ ದಂಡ ಇಟ್ಟುಕೊಂಡಿದ್ದಾರೆ. ‘ನಾನು ನಟಿಸುವ ಪಾತ್ರ ಚೆನ್ನಾಗಿರಬೇಕು. ಸ್ಟ್ರಾಂಗ್ ರೋಲ್ ಸಿಕ್ಕರೆ ಈಗ ಹಿಂದಿ ಸಿನಿಮಾ ಮಾಡೋಕೂ ನಾನು ರೆಡಿ’ ಎಂದಿದ್ದಾರೆ ಸಾಯಿ ಪಲ್ಲವಿ. ಅವರಿಗೆ ಒಪ್ಪುವಂತಹ ಪಾತ್ರವನ್ನು ಯಾರಾದರೂ ಹಿಂದಿಯಲ್ಲಿ ನೀಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಸಾಯಿ ಪಲ್ಲವಿ ತಮ್ಮ ಅದ್ಭುತ ನಟನೆಯ ಮೂಲಕ ಎಲ್ಲರ ಗಮನ ಸೆಳೆದವರು. ಅವರು ಬಾಲಿವುಡ್ಗೆ ತೆರಳೋಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ಇತ್ತೀಚೆಗೆ ಸುದ್ದಿಯಾಗಿತ್ತು. ಈಗ ಅವರು ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಡೋ ಬಗ್ಗೆ ನೀಡಿದ ಹೇಳಿಕೆ ಸಹಜವಾಗಿಯೇ ಕುತೂಹಲ ಮೂಡಿಸಿದೆ. ನಾನಿ ಅಭಿನಯದ ‘ಶ್ಯಾಮ್ ಸಿಂಘ ರಾಯ್’ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿದೆ.
ರಾನಾ ದಗ್ಗುಬಾಟಿ ನಟನೆಯ ‘ವಿರಾಟ ಪರ್ವಮ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ನಾಗ ಚೈತನ್ಯ ನಟನೆಯ ‘ಲವ್ ಸ್ಟೋರಿ’ ಸಿನಿಮಾ ದಲ್ಲಿ ಸಾಯಿ ಪಲ್ಲವಿ ನಟಿಸಿದ್ದರು. ಈ ಸಿನಿಮಾ ತೆರೆಗೆ ಬಂದ ಬೆನ್ನಲ್ಲೇ ನಾಗ ಚೈತನ್ಯ ಹಾಗೂ ಸಮಂತಾ ವಿಚ್ಛೇದನ ಪಡೆದುಕೊಂಡಿ ದ್ದರು. ಆ ಬಳಿಕ ಸಾಯಿ ಪಲ್ಲವಿ ಅವರನ್ನು ಮದುವೆ ಆಗುವಂತೆ ನಾಗ ಚೈತನ್ಯಗೆ ಕೆಲ ಅಭಿಮಾನಿಗಳು ಒತ್ತಾಯಿಸಿದ್ದರು.