ಕೊಡಗಿನ ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿಯಾಗಿದೆ. ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಮೇಲೆ ಐಟಿ ಕಣ್ಣು ಬಿದ್ದಿದೆ. ‘ಕಿರಿಕ್ ಪಾರ್ಟಿ’ ಸಿನಿಮಾದ ಮೂಲಕ ಲಾಂಚ್ ಆದ ರಶ್ಮಿಕಾ ಮಂದಣ್ಣ ಇದೀಗ ಪರ ಭಾಷೆ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿ ಇದ್ದಾರೆ. ಮಹೇಶ್ ಬಾಬು, ಅಲ್ಲು ಅರ್ಜುನ್, ಕಾರ್ತಿ ಹೀಗೆ ಸೌತ್ ಸೂಪರ್ ಸ್ಟಾರ್ ಗಳ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.
ರಶ್ಮಿಕಾ ಸ್ಟಾರ್ ಪಟ್ಟ ಗಟ್ಟಿಯಾಗುತ್ತಿದ್ದ ಹಾಗೆ ಅವರ ಸಂಭಾವನೆ ಮೊತ್ತ ಕೂಡ ಹೆಚ್ಚಾಗುತ್ತಿದೆ. ಲಕ್ಷ ಪಡೆಯುತ್ತಿದ್ದ ರಶ್ಮಿಕಾ ಸಂಭಾವನೆ ಈಗ ದುಬಾರಿಯಾಗಿದೆ. ಚಿತ್ರರಂಗದ ಮಾಹಿತಿ ಪ್ರಕಾರ ರಶ್ಮಿಕಾ ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಈಗ ಕೋಟಿ ಗಡಿ ದಾಟಿದೆ.

ಆಗ ಒಂದು ಚಿತ್ರಕ್ಕೆ 40 ಲಕ್ಷ
‘ಕಿರಿಕ್ ಪಾರ್ಟಿ’ ನಂತರ ಚಿತ್ರರಂಗದ ಪ್ರಾರಂಭದ ದಿನಗಳಲ್ಲಿ ರಶ್ಮಿಕಾ ಮಂದಣ್ಣ ಒಂದು ಸಿನಿಮಾಗೆ 40 ಲಕ್ಷ ಪಡೆಯುತ್ತಿದ್ದರು. ಆ ಸಮಯದಲ್ಲಿ ರಶ್ಮಿಕಾ ‘ಅಂಜನಿ ಪುತ್ರ’, ‘ಚಮಕ್’, ‘ಚಲೋ’ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆ ನಂತರ ತೆಲುಗಿನಲ್ಲಿ ಹೆಚ್ಚು ಅವಕಾಶಗಳು ಶುರು ಆದವು.
60 ರಿಂದ 80 ಲಕ್ಷ ಕೇಳಿದ್ರು
‘ಗೀತಾ ಗೋವಿಂದಂ’ ಸಿನಿಮಾ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿತ್ತು. ಪ್ರೀತಿ ಪ್ರೇಮದ ಜೊತೆಗೆ ಫ್ಯಾಮಿಲಿ ಓರಿಯೆಂಟೆಡ್ ಆಗಿದ್ದ ಸಿನಿಮಾ ಹಿಟ್ ಆಯ್ತು. ರಶ್ಮಿಕಾ ಸಂಭಾವನೆ ಹೆಚ್ಚಾಗಲು ಈ ಸಿನಿಮಾದ ಗೆಲುವು ಪ್ರಮುಖ ಕಾರಣವಾಗಿತು. 40 ಲಕ್ಷವಿದ್ದ ಸಂಭಾವನೆ 60 ರಿಂದ 80 ಲಕ್ಷಕ್ಕೆ ಹೋಯ್ತು.
ಪೊಗರು’ ಸಿನಿಮಾಗೆ 64 ಲಕ್ಷ
ಸದ್ಯ ಕನ್ನಡದಲ್ಲಿ ರಶ್ಮಿಕಾ ನಟಿಸುತ್ತಿರುವುದು ಒಂದೇ ಒಂದು ಕನ್ನಡ ಸಿನಿಮಾದಲ್ಲಿ. ಅದು ‘ಪೊಗರು’. ಈ ಸಿನಿಮಾಗಾಗಿ ರಶ್ಮಿಕಾ ಮಂದಣ್ಣ 64 ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನುವ ಮಾಹಿತಿ ಇದೆ. ‘ಪೊಗರು’ ಸಿನಿಮಾ ಒಪ್ಪಿಕೊಂಡಾಗ ರಶ್ಮಿಕಾ ತೆಲುಗು ಸಿನಿಮಾ ಮಾಡಿದ್ದರೂ, ಈ ಮಟ್ಟಿಗೆ ಜನಪ್ರಿಯತೆ ಪಡೆದಿರಲಿಲ್ಲ.
ಕೋಟಿ ತಲುಪಿದ ಸಾನ್ವಿ ಸಂಭಾವನೆ
ಸದ್ಯ ರಶ್ಮಿಕಾ ಮಂದಣ್ಣ ಒಂದು ಸಿನಿಮಾಗೆ ಬರೋಬ್ಬರಿ 1 ಕೋಟಿ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ಮಹೇಶ್ ಬಾಬು ನಟನೆಯ ‘ಸರಿಲೇರು ನೀಕೆವ್ವರು’ ಹಾಗೂ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದ ಮೂಲಕ ರಶ್ಮಿಕಾ ಕೋಟ್ಯಾಧಿಪತಿ ಆಗಿದ್ದಾರೆ.
ಸಂಭಾವನೆ ಬಗ್ಗೆ ಹೀಗೆ ಹೇಳಿದ್ರು
ರಶ್ಮಿಕಾ ಈ ಹಿಂದೆ ಪ್ರತಿಕಾಗೋಷ್ಟಿವೊಂದರಲ್ಲಿ ಸಂಭಾವನೆ ಬಗ್ಗೆ ಕೇಳಿದ್ದ ಪ್ರಶ್ನೆಗೆ ರಶ್ಮಿಕಾ ”ಯಾರೇ ಕೆಲಸ ಮಾಡಿದರೂ ಪ್ರಮೋಷನ್ ಬೇಕಾಗುತ್ತದೆ. ನಾನು ಫ್ರೀಯಾಗಿ ಸಿನಿಮಾ ಮಾಡಲೇ. ನಿದ್ದೆ, ಊಟ ಇಲ್ಲದೆ ಕಷ್ಟ ಪಡುತ್ತಿದ್ದೇನೆ, ಎಲ್ಲ ತಯಾರಿ ಮಾಡಿಕೊಂಡಿದ್ದೇನೆ ಹೀಗಾಗಿ ಸಂಭಾವನೆ ಹೆಚ್ಚು ಮಾಡಿಕೊಂಡರೆ ತಪ್ಪೇನು. 2017 ರಲ್ಲಿ ಮೊದಲ ಸಿನಿಮಾ ಮಾಡಿದೆ, ಅಲ್ಲಿಂದ ನಾನು ಕೂಡ ಬೆಳೆಯಬೇಕಲ್ಲವೇ.” ಎಂದಿದ್ದರು.
