ಬೆಂಗಳೂರು:- ಅಕ್ರಮವಾಗಿ ಚಿನ್ನ ಕಳ್ಳ ಸಾಗಾಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್ ಅವರನ್ನು ಅರೆಸ್ಟ್ ಮಾಡಲಾಗಿದೆ.
ಇದೇ ವಿಚಾರವಾಗಿ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕಂದಾಯ ಗುಪ್ತಚರ ನಿರ್ದೇಶನಾಲಯ ಅವರು ಚಿನ್ನದ ಕಳ್ಳ ಸಾಗಾಣಿಕೆ ತನಿಖೆ ಮಾಡುತ್ತಿರುವ ಬಗ್ಗೆ ವರದಿ ಬರುತ್ತಿದೆ. ನಮ್ಮ ಡಿಜಿಪಿ ಅವರ ಮಗಳು ಭಾಗಿಯಾಗಿದ್ದಾರೆ ಎಂದು ವರದಿ ಬಂದಿದೆ. ಅದರ ಬಗ್ಗೆ ಡಿಆರ್ಐ ಅವರು ಪೂರ್ಣ ಪ್ರಮಾಣದಲ್ಲಿ ತನಿಖೆ ಮಾಡುವ ತನಕ ನಮಗೆ ಯಾವುದೇ ಮಾಹಿತಿ ನೀಡಲ್ಲ. ಹಾಗಾಗಿ ಡಿಆರ್ಐ ಅವರು ಯಾವುದೇ ಮಾಹಿತಿ ನಮಗೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಪೊಲೀಸ್ ಅವರು ತೆಗೆದುಕೊಂಡ ಮಾಹಿತಿ ಆಧಾರದ ಮೇಲೆ ಮಾತನಾಡುತ್ತಿದ್ದೇನೆ. ಪ್ರಕರಣದ ತನಿಖೆ ಆದ ಬಳಿಕ ನಾವು ಪ್ರತಿಕ್ರಿಯೆ ಕೊಡಬಹುದು ಎಂದು ಹೇಳಿದರು.