ದುಬೈ ಮೂಲದ ಉದ್ಯಮಿ ಆಂಟನಿ ಜೊತೆ ಹಿಂದೂ ಸಂಪ್ರದಾಯದಂತೆ ಕೀರ್ತಿ ಸುರೇಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೋವಾದಲ್ಲಿ ಮದುವೆಯಾಗಿದ್ದು ಆಂಟನಿ ತಟ್ಟಿಲ್ ಕ್ರಿಶ್ಚಿಯನ್ ಆಗಿದ್ದರೂ ಕೂಡಾ ಅವರು ಮೊದಲು ಹಿಂದೂ ಸಂಪ್ರದಾಯದಲ್ಲಿ ಮದುವೆಯಾಗಿದ್ದಾರೆ. ಇಂದು ಗೋವಾದಲ್ಲಿ ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಕೀರ್ತಿ ಸುರೇಶ್ ಮತ್ತು ಆಂಟೊನಿ ಅವರು ಮದುವೆ ಆಗಿದ್ದಾರೆ. ನಂತರ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ದಿನಾ ಒಂದು ಗ್ಲಾಸ್ ಈ ನೀರನ್ನು ಕುಡಿಯಿರಿ ಸಾಕು: ಬಲೂನ್ ತರ ಇರೋ ಹೊಟ್ಟೆ ಬೇಗ ಕರಗುತ್ತೆ!
ಅಭಿಮಾನಿಗಳು, ಸೆಲೆಬ್ರಿಟಿಗಳು, ಆಪ್ತರು ‘ಮಹಾನಟಿ’ ಕೀರ್ತಿ ಸುರೇಶ್ಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಕೀರ್ತಿ ಸುರೇಶ್ ಅವರು ಆಕರ್ಷಕವಾದ ಕೆಂಬಣ್ಣದ ಸೀರೆ ಉಟ್ಟು ತುಂಬಾ ಮುದ್ದಾಗಿ ಕಾಣಿಸಿದ್ದರು. ಅದರೊಂದಿಗೆ ಕೆಂಪು ಹರಳಿನ ಗ್ರ್ಯಾಂಡ್ ನೆಕ್ಲೆಸ್ ಹಾಗೂ ಮ್ಯಾಚಿಂಗ್ ಇಯರಿಂಗ್ಸ್ ಧರಿಸಿದ್ದರು. ಅವರು ಗಂಡನ ಜೊತೆಗೆ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗುತ್ತಿವೆ.