ಚಂಡೀಗಢ: ಪಂಜಾಬ್ ಚುನಾವಣಾ ಆಯೋಗದ ಐಕಾನ್ ಆಗಿದ್ದ ನಟ ಸೋನು ಸೂದ್ ಅವರ ನೇಮಕಾತಿಯನ್ನು ಭಾರತೀಯ ಚುನಾವಣಾ ಆಯೋಗವು ಇದೀಗ ರದ್ದುಗೊಳಿಸಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಎಸ್. ಕರುಣಾ ರಾಜು ಹೇಳಿದ್ದಾರೆ.
ಮುಂಬರುವ ವಿಧಾನಸಭೆಗೆ ಕುಟುಂಬದ ಸದಸ್ಯರು ಸ್ಪರ್ಧಿಸುತ್ತಿರುವುದರಿಂದ ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿರುವುದಾಗಿ ಸೋನು ಸೂದ್ ಹೇಳಿದ್ದಾರೆ.

ಭಾರತದ ಚುನಾವಣಾ ಆಯೋಗ ಒಂದು ವರ್ಷದ ಹಿಂದೆ ಸೂದ್ ಅವರನ್ನು ರಾಜ್ಯದ ಐಕಾನ್ ಆಗಿ ನೇಮಕ ಮಾಡಿತ್ತು. ಪಂಜಾಬ್‌ನ “ಸ್ಟೇಟ್ ಐಕಾನ್” ಆಗಿ ಸೂದ್ ಅವರ ನೇಮಕಾತಿಯನ್ನು ಇಸಿಐ ಜನವರಿ 4 ರಂದು ರದ್ದುಗೊಳಿಸಿದೆ ಎಂದು ಪಂಜಾಬ್‌ನ ಮುಖ್ಯ ಚುನಾವಣಾ ಅಧಿಕಾರಿ ಎಸ್. ಕರುಣಾ ರಾಜು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೂದ್ ಕಳೆದ ನವೆಂಬರ್‌ನಲ್ಲಿ ತಮ್ಮ ಸಹೋದರಿ ಮಾಳವಿಕಾ ರಾಜಕೀಯಕ್ಕೆ ಸೇರುತ್ತಿದ್ದಾರೆ. ತನಗೆ ಅಂತಹ ಯಾವುದೇ ಯೋಜನೆಗಳಿಲ್ಲ ಎಂದು ಸೋನು ಸೂದ್ ತಿಳಿಸಿದ್ದರು.
ಎಲ್ಲಾ ಒಳ್ಳೆಯ ಸಂಗತಿಗಳಂತೆ, ಈ ಪ್ರಯಾಣವೂ ಕೊನೆಗೊಂಡಿದೆ. ನಾನು ಸ್ವಯಂಪ್ರೇರಣೆಯಿಂದ ಪಂಜಾಬ್ ರಾಜ್ಯದ ಐಕಾನ್ ಸ್ಥಾನದಿಂದ ಕೆಳಗಿಳಿದಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ನನ್ನ ಕುಟುಂಬದ ಸದಸ್ಯರು ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ನಾನು ಮತ್ತು EC ಈ ನಿರ್ಧಾರವನ್ನು ಪರಸ್ಪರ ತೆಗೆದುಕೊಂಡಿದ್ದೇವೆ. ಭವಿಷ್ಯದ ಪ್ರಯತ್ನಗಳಿಗೆ ನಾನು ಅವರಿಗೆ ಶುಭ ಹಾರೈಸುತ್ತೇನೆ ಎಂದು ಸೂದ್ ಹೇಳಿದ್ದಾರೆ.