ನಟ ರಜನಿಕಾಂತ್ ಅವರು ನನ್ನನ್ನು ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ನಟಿ ಕವಿತಾ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಯೂಟ್ಯೂಬ್ ಚಾನೆಲ್ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಜನಿಕಾಂತ್ ಜೊತೆಗಿನ ಗಾಸಿಪ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ರಜನಿಕಾಂತ್ ಅವರ ಜೊತೆ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರಿಸುತ್ತಿದ್ದಾಗ ಇಬ್ಬರೂ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದವು. ಮೋಹನ್ ಬಾಬು ಜೊತೆ ಸಿನಿಮಾದಲ್ಲಿ ನಟಿಸುವಾಗ ಈ ವಿಷಯ ತಿಳಿಯಿತು. ಈ ಸುದ್ದಿ ತಿಳಿದು ಕೋಪಗೊಂಡು ಮೋಹನ್ ಬಾಬು ಅವರ ಸಿನಿ ಜರ್ನಿ ಮೇಲೆ ಪರಿಣಾಮ ಬೀರುತ್ತದೆ ಎಂದು ಶೂಟಿಂಗ್ ನಿಲ್ಲಿಸಿದೆ ಎಂದಿದ್ದಾರೆ.
ರಜನಿಕಾಂತ್ ಜೊತೆ ನನ್ನ ಮದುವೆ ಆಗಿದೆ
ಈ ರೀತಿ ಸುದ್ದಿ ಪ್ರಕಟಿಸಿದ್ದ ಪತ್ರಿಕಾ ಕಚೇರಿಗೆ ಹೋಗಿ ಜಗಳವಾಡಿದ್ದೆ. ಬಳಿಕ ಪತ್ರಿಕೆಯವರು ಸ್ಪಷ್ಟೀಕರಣ ನೀಡುವುದಾಗಿ ಹೇಳಿದ್ದರು. ಆ ಬಳಿಕವಷ್ಟೇ ಈ ವದಂತಿ ಅಂತ್ಯಗೊಂಡಿತ್ತು. ಆ ಸಂದರ್ಭದಲ್ಲಿ ನಟ ರಜನಿಕಾಂತ್ ಜೊತೆ ನನ್ನ ಮದುವೆ ಆಗಿದೆ ಎಂಬ ಸುದ್ದಿ ವ್ಯಾಪಕವಾಗಿ ಹಬ್ಬಿತ್ತು ಎಂದು ನಟಿ ಕವಿತಾ ಹೇಳಿಕೊಂಡಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)