ಬಾಲಿವುಡ್ ನಟ, ನಿರ್ಮಾಪಕ ಮಿಲಿಂದ್ ಸೋಮನ್ ತಮ್ಮ 59ನೇ ವಯಸ್ಸಿನಲ್ಲೂ ಚಿರ ಯುವಕರು ನಾಚುವಂತೆ ಫಿಟ್ ನೆಸ್ ಮೇಟೇನ್ ಮಾಡಿದ್ದಾರೆ. ಇದೀಗ ಮಿಲಿಂದ್ ಪತ್ನಿ ಅಕಿಂತ ಅವರೊಂದಿಗೆ ಮಹಾಕುಂಬಮೇಳದಲ್ಲಿ ಭಾಗಿಯಾಗಿ ಪವಿತ್ರಾ ಸ್ನಾನ ಮಾಡಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಮಿಲಿಂದ್ ಹಾಗೂ ಅಂಕಿತಾ ಭಾಗಿಯಾಗಿ ಗಂಗಾ ಸ್ನಾನ ಮಾಡಿದ್ದಾರೆ. ಈ ವೇಳೆ ತೆಗೆದ ಫೋಟೋಗಳನ್ನು ಮಿಲಿಂದ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನನ್ನ ಹೃದಯ ಈಗ ಎಷ್ಟು ತುಂಬಿದೆ ಎಂಬುದನ್ನು ವರ್ಣಿಸಲು ಪದಗಳೇ ಸಾಲದು. ಮೌನಿ ಅಮವಾಸ್ಯೆಯ ಶುಭ ಕ್ಷಣಗಳಲ್ಲಿ ಮಹಾಕುಂಭದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ನನ್ನ ಗ್ರಹಿಕೆಗೆ ಮೀರಿದ್ದು ಎಂದು ಮಿಲಿಂದ್ ಬರೆದುಕೊಂಡಿದ್ದಾರೆ.
ನಮ್ಮ ಅತ್ಯಲ್ಪ ಅಸ್ತಿತ್ವದ ಮಹತ್ವವನ್ನು ನಿಮಗೆ ಅರಿತುಕೊಳ್ಳುವ ಕ್ಷಣಗಳು ಇವು ಎಂದಿರುವ ನಟ ಇದೇ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಸಂತಾಪ ತಿಳಿಸಿದ್ದಾರೆ.
ನಿನ್ನೆ ರಾತ್ರಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಜನರಿಗೆ ನನ್ನ ಹೃದಯ ಮಿಡಿಯುತ್ತಿದೆ. ನಮ್ಮ ಪ್ರಾರ್ಥನೆಗಳ ಮೂಲಕ ನಾವೆಲ್ಲರೂ ಶಾಂತಿಯನ್ನು ಕಂಡುಕೊಳ್ಳೋಣ. ಹರ ಹರ ಮಹದೇವ್ ಎಂದು ಮಿಲಿಂದ್ ಪತ್ನಿ ಅಂಕಿತಾ ಬರೆದುಕೊಂಡಿದ್ದಾರೆ.
2018ರಲ್ಲಿ ಮಿಲಿಂದ್ ಅಂಕಿತಾ ಅವರನ್ನು 2ನೇ ಮದುವೆಯಾದರು.ಇಬ್ಬರ ನಡುವೆ 26 ವರ್ಷಗಳ ಅಂತರವಿದ್ದು ಇವರ ವಯಸ್ಸಿನ ಅಂತರ ಸಾಕಷ್ಟು ಸುದ್ದಿಯಾಗಿತ್ತು.