ತಮಿಳಿನ ಸ್ಟಾರ್ ನಟ ಧನುಶ್ ಪರಭಾಷೆಯಲ್ಲೂ ಮಿಂಚುತ್ತಿದ್ದಾರೆ.ತಮಿಳಿನಲ್ಲಿ ಕೈತುಂಬಾ ಅವಕಾಶಗಳನ್ನು ಹೊಂದಿರುವ ಧನುಷ್ ಇದೀಗ ಮತ್ತೊಮ್ಮೆ ಹಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾರೆ. ಹಾಲಿವುಡ್ ನ ಸ್ಟಾರ್ ನಟಿ ಸಿಡ್ನಿ ಸ್ವೀನಿಗೆ ಧನುಷ್ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ.
ಧನುಶ್ ಹಾಲಿವುಡ್ನಲ್ಲಿ ಈಗಾಗಲೇ ಸ್ಟಾರ್ ನಟರುಗಳೊಟ್ಟಿಗೆ ನಟಿಸಿ ಬಂದಿದ್ದಾರೆ. ಜೊತೆಗೆ ಸೋಲೋ ಹೀರೋ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಇದೀಗ ಧನುಶ್ ಮತ್ತೊಮ್ಮೆ ಹಾಲಿವುಡ್ಗೆ ಹಾರಲಿದ್ದಾರೆ.
2019 ರಲ್ಲಿ ಬಿಡುಗಡೆ ಆದ ‘ದಿ ಎಕ್ಸಾರ್ಡಿನರಿ ಜರ್ನಿ ಆಫ್ ಎ ಫಕೀರ್’ ಹೆಸರಿನ ಇಂಗ್ಲೀಷ್ ಸಿನಿಮಾನಲ್ಲಿ ಧನುಶ್ ನಟಿಸಿದ್ದರು. ಅದಾದ ಬಳಿಕ ಮಾರ್ವೆಲ್ ಖ್ಯಾತಿಯ ರೋಸ್ಸೊ ಬ್ರದರ್ಸ್ ನಿರ್ದೇಶನ ಮಾಡಿ, ನಿರ್ಮಾಣವೂ ಮಾಡಿದ್ದ, ಹಾಲಿವುಡ್ನ ದೊಡ್ಡ ಸ್ಟಾರ್ ನಟರು ನಟಿಸಿದ್ದ ‘ದಿ ಗ್ರೇ ಮ್ಯಾನ್’ ಸಿನಿಮಾದ ಪವರ್ಫುಲ್ ಪಾತ್ರವೊಂದರಲ್ಲಿ ಧನುಶ್ ನಟಿಸಿದ್ದರು. ಇದೀಗ ಮೂರನೇ ಬಾರಿಗೆ ಧನುಶ್ ಹಾಲಿವುಡ್ಗೆ ಹೊರಟಿದ್ದಾರೆ.
ಧನುಶ್, ‘ಸ್ಟ್ರೀಟ್ ಫೈಟರ್’ ಹೆಸರಿನ ಹಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಸಿನಿಮಾವನ್ನು ಸೋನಿ ನಿರ್ಮಾಣ ಮಾಡಲಿದ್ದು, ಹಾಲಿವುಡ್ನ ಜನಪ್ರಿಯ ನಿರ್ದೇಶಕರೊಬ್ಬರು ನಿರ್ದೇಶನ ಮಾಡಲಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ಹಾಲಿವುಡ್ ಖ್ಯಾತ ನಟಿ ಸಿಡ್ನಿ ಸ್ವೀನಿ ನಟಿಸಲಿದ್ದಾರೆ. ಕ್ವಿಂಟನ್ ಟೆರಂಟೀನೊ ನಿರ್ದೇಶನದ ‘ಒನ್ಸ್ ಅಪಾನ್ ಎ ಟೈಂ ಇನ್ ಹಾಲಿವುಡ್’ ಸಿನಿಮಾ ಸೇರಿದಂತೆ ಹಲವು ಜನಪ್ರಿಯ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸದ್ಯ ಧನುಶ್ ‘ಕುಬೇರ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾವನ್ನು ಶೇಖರ್ ಕಮ್ಮುಲ ನಿರ್ದೇಶನ ಮಾಡುತ್ತಿದ್ದು, ಸಿನಿಮಾದಲ್ಲಿ ನಾಗಾರ್ಜುನ ಮತ್ತು ರಶ್ಮಿಕಾ ಮಂದಣ್ಣ ಸಹ ಇದ್ದಾರೆ. ಜೊತೆಗೆ ಧನುಶ್ ‘ಇಡ್ಲಿ ಕಡೈ’ ಹೆಸರಿನ ಸಿನಿಮಾ ನಿರ್ದೇಶನ ಸಹ ಮಾಡುತ್ತಿದ್ದಾರೆ. ಇಳಯರಾಜ ಜೀವನ ಆಧರಿಸಿದ ಸಿನಿಮಾದಲ್ಲಿಯೂ ಧನುಶ್ ನಟಿಸಲಿದ್ದು, ಸಿನಿಮಾವನ್ನು ಅರುಲ್ ಮಟ್ಟೇಶ್ವರನ್ ನಿರ್ದೇಶನ ಮಾಡಲಿದ್ದಾರೆ. ಹಿಂದಿಯಲ್ಲಿ ಸಹ ಒಂದು ಸಿನಿಮಾ ಮಾಡುತ್ತಿದ್ದಾರೆ. ಸಖತ್ ಬ್ಯುಸಿ ಶೆಡ್ಯೂಲ್ ನಡುವೆಯೂ ಧನುಷ್ ಹಾಲಿವುಡ್ ನಲ್ಲಿ ಕಮಾಲ್ ಮಾಡಲು ರೆಡಿಯಾಗಿದ್ದಾರೆ.