ಜಾಮೀನು ವಿಚಾರ ಕೇಳಿ ಖುಷಿಪಟ್ಟ ನಟ ದರ್ಶನ್! ಜೈಲಿನತ್ತ ಧಾವಿಸುತ್ತಿರುವ ಅಭಿಮಾನಿಗಳು

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ A2 ಆರೋಪಿಯಾಗಿರುವ ದರ್ಶನ್​​​ಗೆ ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. ಬಳ್ಳಾರಿ ಜೈಲು ಸೇರಿದ ಬಳಿಕ ಸಂಕಷ್ಟ ಅನುಭವಿಸುತ್ತಿದ್ದ ದರ್ಶನ್​ಗೆ ಕೋರ್ಟ್​ ಅಲ್ಪಾವಧಿಯ ಮುಕ್ತಿ ನೀಡಿದೆ. ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್​​ಗೆ ಚಿಕಿತ್ಸೆಯ ಅನಿವಾರ್ಯತೆ ಇರುವ ಕಾರಣ ಮಧ್ಯಂತರ ಜಾಮೀನು ಸಿಕ್ಕಿದೆ. ಜಾಮೀನು ಸಿಕ್ಕ ಬೆನ್ನಲೇ ಅಭಿಮಾನಿಗಳು ಜೈಲಿನ ಮೂಮದೇ ಜಮಾಯಿಸಿದ್ದಾರೆ.ನಟ ದರ್ಶನ್ ಜಾಮೀನು ವಿಚಾರ ಕೇಳಿ ಖುಷಿಪಟ್ಟಿದ್ದಾರೆ. ಜೈಲಿನ ಸಿಬ್ಬಂದಿಗಳ ಮೂಲಕ ಮಾಹಿತಿ ಪಡೆದಿದ್ದಾರೆ. ದರ್ಶನ್ ಕಣ್ತುಂಬಿಕೊಳ್ಳಲು ಜೈಲಿನತ್ತ ಜಮಾಯಿಸುತ್ತಿದ್ದಾರೆ.