ಬೆಂಗಳೂರು: ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪ್ರಮುಖ ಆರೋಪಿ ಆಗಿದ್ದಾರೆ. ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ಸಂಕಷ್ಟ ಎದುರಾಗಿದೆ. ನಟ ದರ್ಶನ್ ಫಾರ್ಮ್ಹೌಸ್ನಲ್ಲಿ ಮ್ಯಾನೇಜರ್ ಸೂಸೈಡ್ ಮಾಡಿಕೊಂಡಿದ್ದ ಪ್ರಕರಣ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
ಆನೇಕಲ್ ಸಮೀಪದ ಬಗ್ಗನದೊಡ್ಡಿಯ ಫಾರ್ಮ್ ಹೌಸ್ನಲ್ಲಿ ಕೆಲಸ ಮಾಡ್ತಿದ್ದ ಶ್ರೀಧರ್ ಎಂಬ ವ್ಯಕ್ತಿ ಮಾನಸಿಕ ಖಿನ್ನತೆಗೆ ಒಳಗಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ ಏಪ್ರಿಲ್ ತಿಂಗಳಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಮ್ಯಾನೇಜರ್, ಡೆತ್ನೋಟ್ ಮತ್ತು ವಿಡೀಯೋ ಮಾಡಿಟ್ಟು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದೀಗ ಈ ವ್ಯಕ್ತಿ ಆತ್ಮಹತ್ಯೆಗೂ ಮುನ್ನ ಮಾಡಿದ್ದ ಎರಡು ಸೆಕ್ಸಿ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗ್ತಿದೆ. ಈ ಪ್ರಕರಣದಲ್ಲಿ ಇನ್ನೇನಾಗಿತ್ತೋ ಏನೋ ಎಂಬ ಅನುಮಾನಗಳನ್ನ ಒಂದಿಷ್ಟು ಜನ ವ್ಯಕ್ತಪಡಿಸುತ್ತಿದ್ದು, ಏಪ್ರಿಲ್ನಲ್ಲಿ ನಡೆದಿದ್ದ ಆತ್ಮಹತ್ಯೆ ಪ್ರಕರಣ ಈಗ ಮತ್ತೆ ಸದ್ದು ಮಾಡ್ತಿದೆ.
ಇನ್ನೂ ದರ್ಶನ್ ಅವರು ಕುಟುಂಬದವರನ್ನು ತಮ್ಮಿಂದ ದೂರವೇ ಇಟ್ಟಿದ್ದರು. ಪತ್ನಿ ಜಯಲಕ್ಷ್ಮಿ ಅವರನ್ನು ದೂರ ಇಟ್ಟಿದ್ದರು. ತಾಯಿ ಮೀನಾ ತುಗೂದೀಪ ಕೂಡ ದರ್ಶನ್ ಜೊತೆ ಇಲ್ಲ. ಹೀಗಾಗಿ ಅವರ್ಯಾರೂ ದರ್ಶನ್ ಅವರನ್ನು ನೋಡಲು ಬಂದಿಲ್ಲ. ಇನ್ನು ಆಪ್ತರು ಎನಿಸಿಕೊಂಡ ಕೆಲವರು ಕೂಡ ದರ್ಶನ್ನಿಂದ ದೂರವೇ ಇದ್ದಾರೆ. ಇನ್ನು ಕೆಲವು ಆಪ್ತರು ಜೈಲಿನಲ್ಲೇ ಇದ್ದಾರೆ. ಹೀಗಾಗಿ, ಅವರನ್ನು ನೋಡೋಕೆ ಯಾರೆಂದರೆ ಯಾರೂ ಬಂದಿಲ್ಲ.