ಕಿಡಿಗೇಡಿಗಳ ಕೃತ್ಯ: ಫಸಲಿಗೆ ಬಂದಿದ್ದ 500 ಅಡಿಕೆ ಗಿಡಗಳು ನಾಶ, ರೈತ ಕಂಗಾಲು!

ತುಮಕೂರು:- ಕಿಡಿಗೇಡಿಗಳ ಕೃತ್ಯದಿಂದ ಫಸಲಿಗೆ ಬಂದಿದ್ದ 500 ಅಡಿಕೆ ಗಿಡಗಳು ನಾಶವಾಗಿರುವ ಘಟನೆ ತಾಲೂಕಿನ ಬರಗೂರಿನಲ್ಲಿ ಜರುಗಿದೆ. KSRTCಗೆ ರಾಷ್ಟ್ರೀಯ ಹಾಗೂ ವಿಶ್ಚ ಮಟ್ಟದ ಪ್ರಶಸ್ತಿಗಳು! ಗಣೇಶ್ ಎಂಬ ರೈತರಿಗೆ ಸೇರಿದ ಅಡಿಕೆ ಗಿಡಗಳನ್ನು ರಾತ್ರಿ ವೇಳೆ ಕಿಡಿಗೇಡಿಗಳು ಕಡಿದು ಹಾಕಿದ್ದಾರೆ. ಗಣೇಶ್ ತೋಟಕ್ಕೆ ಬಂದು ನೋಡಿದಾಗ ಗಿಡ ಕಡಿದಿರುವುದು ಬೆಳಕಿಗೆ ಬಂದಿದೆ. ಹಳೇ ದ್ವೇಷದ ಹಿನ್ನೆಲೆ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಕಿಡಿಗೇಡಿಗಳ ವಿರುದ್ಧ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.