ಮಂಡ್ಯ: KRS ಡ್ಯಾಂನಿಂದ ಹೊರ ಹರಿವು ಹೆಚ್ಚಳ ಹಿನ್ನೆಲೆ. ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆಂದು ಆರೋಪಿಸಿ ಪ್ರತಿಭಟನೆ. ರೈತ ಹಿತ ರಕ್ಷಣ ಸಮಿತಿ, ಕನ್ನಡ ಸೇನೆಯಿಂದ ಪ್ರತಿಭಟನೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಪ್ರತಿಭಟನೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕುಳಿತು ಆಕ್ರೋಶ. ಕಪ್ಪುಕಟ್ಟಿ ಕಟ್ಟಿಕೊಂಡು ಸಿಎಂ, ಡಿಸಿಎಂ ಘೋಷಣೆ. ಕುಡಿಯುವ ನೀರಿಗೆ ಎಂದು ಸುಳ್ಳು ಹೇಳಿ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ. ಸರ್ಕಾರ ರಾಜ್ಯದ ಜನರನ್ನ ಜಲಕ್ಷಾಮಕ್ಕೆ ನೂಕುತ್ತಿದೆ.ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ.ಕೂಡಲೇ ತಮಿಳುನಾಡಿಗೆ ಹೋಗುತ್ತಿರುವ ನೀರು ನಿಲ್ಲಿಸುವಂತೆ ಆಗ್ರಹ.
ಬೆಂಗಳೂರಿಗೆ ಬಿಟ್ಟ ನೀರನ್ನ ತಮಿಳುನಾಡಿಗೆ ಬಿಟ್ಟರೆಂದು ಅಪಪ್ರಚಾರ. ಮಂಡ್ಯ ಬಿಜೆಪಿ ಕಾರ್ಯಕರ್ತರಿಂದ ಅಪಪ್ರಚಾರ.
ರಾಜ್ಯ ಸರ್ಕಾರದ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ. ನಿನ್ನೆಯಿಂದ ಬೆಂಗಳೂರು ಜನರ ಕುಡಿಯುವ ಉಪಯೋಗಕ್ಕೆ ನೀರು ಬಿಟ್ಟಿರುವ ಸರ್ಕಾರ.
KRS ಅಣೆಕಟ್ಟೆಯಿಂದ ಟಿ.ಕೆ.ಹಳ್ಳಿ ಜಲಗಾರಕ್ಕೆ ನೀರು. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ .ಟಿ.ಕೆ.ಹಳ್ಳಿಯಲ್ಲಿರುವ BWSSB ಜಲಗಾರ. ಟಿ.ಕೆ.ಹಳ್ಳಿಯಿಂದ ಬೆಂಗಳೂರಿಗೆ ನೀರುಣಿಸುವ ಜಲಗಾರ.ಸಿಎಂ, ಡಿಸಿಎಂ ಅವರನ್ನ ವಾಟರ್ ಮ್ಯಾನ್ ಗಳಿಗೆ ಹೋಲಿಸಿ ಟೀಕೆ.ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೂ ನಿರ್ಧರಿಸಿರುವ ಬಿಜೆಪಿ, ಇತರೆ ಸಂಘಟನೆಗಳು