ಮಂಡ್ಯ: ಉತ್ತರಪ್ರದೇಶದ ಪ್ರಯಾಗ್ ರಾಜ್ನಲ್ಲಿನ ಮಹಾಕುಂಭ ಮೇಳ ಮುಗಿಸಿ ಮದ್ದೂರಿಗೆ ವಾಪಾಸ್ ಬರುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿರುವ ಘಟನೆ ಅಯೋಧ್ಯೆ ಬಳಿ ನಡೆದಿದೆ. ಬುಧವಾರ ಮುಂಜಾನೆ ಅವಘಡ ನಡೆದಿದ್ದು, ಪಟ್ಟಣದ ರಾಮಾಣಿ ಶಾಮೀಲ್ ಮಾಲೀಕರಾದ ಜಯಂತಿ ಲಾಲ್ ಪಾಟೇಲ್ ಅವರ ಪತ್ನಿ ಮಂಜುಳಾ ಬೇನ್ (59) ಮೃತ ಮಹಿಳೆ.
ಬೀದರ್ ಮೂಲದ ಯಾತ್ರಿಕರ ವಾಹನ ಅಪಘಾತ ಪ್ರಕರಣ ; ಗಾಯಾಳುಗಳ ಭೇಟಿಯಾದ ಸಚಿವ ಖಂಡ್ರೆ
ಬಸ್ ನಲ್ಲಿ ಹೋಗಿ ಮಹಾಕುಂಭ ಮೇಳ ಮುಗಿಸಿ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ, ವಾಪಾಸ್ ಬರುವ ಸಂದರ್ಭದಲ್ಲಿ ಅಯೋಧ್ಯೆ ಬಳಿ ಬಸ್ಸು ನಿಲ್ಲಿಸಿದೆ. ಈ ವೇಳೆ ಮಂಜುಳಾ ಬೇನ್ ಅವರು ಶೌಚಗೃಹಕ್ಕೆ ಹೋಗಲು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಅಯೋಧ್ಯೆ ಬಳಿ ಅಪರಿಚಿತ ವಾಹನ ಡಿಕ್ಕಿಹೊಡೆದು ಈ ಘಟನೆ ನಡೆದಿದೆ.