Accident: ಬೈಕ್ ಸವಾರನ ಮೇಲೆ ಕ್ರೇನ್ ಹರಿದು ವ್ಯಕ್ತಿ ದುರ್ಮರಣ!

ವಿಜಯಪುರ:-ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಬೈಕ್ ಸವಾರನ ಮೇಲೆ ಕ್ರೇನ್ ಹರಿದು ವ್ಯಕ್ತಿ ದುರ್ಮರಣ ಹೊಂದಿದ ಘಟನೆ ಜರುಗಿದೆ. ಕಿತ್ತೂರು ಚನ್ನಮ್ಮ, ಅಷ್ಫಖುಲ್ಲಾಖಾನ ರವರ ಜಯಂತೋತ್ಸವ ಆಚರಣೆ! 40 ವರ್ಷದ ಶಿವಪುತ್ರಪ್ಪ ಭಜಂತ್ರಿ ಸಾವನ್ನಪ್ಪಿದ ವ್ಯಕ್ತಿ. ಪಟ್ಟಣದ ಹೋಂಡಾ ಶೋರೂಂ ಬಳಿ ಮುದ್ದೇಬಿಹಾಳ-ನಾರಾಯಣಪುರ ರಾಜ್ಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಅಪಘಾತದ ಬಳಿಕ ಸ್ಥಳದಲ್ಲೇ ಕ್ರೇನ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.