ಟಾಸ್ಕ್ ಆಡುತ್ತಿದ್ದಾಗ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಅವಘಡ ಸಂಭವಿಸಿದೆ. ಈ ಕಾರಣದಿಂದಾಗಿ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿರುವ ತನಿಷಾ ಕುಪ್ಪಂಡ (Tanisha Kuppanda) ಮನೆಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಟಾಸ್ಕ್ ಆಡುವಾಗ ಅವರಿಗೆ ಬಲವಾದ ಪೆಟ್ಟು ಬಿದ್ದಿದ್ದು, ಚಿಕಿತ್ಸೆಗಾಗಿ (Treatment) ಅವರನ್ನು ಮನೆಯಿಂದ ಕಳುಹಿಸಲಾಗಿದೆ ಎನ್ನುವ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಡ್ರೋನ್ ತಂಡದಲ್ಲಿ ಪವಿ, ತುಕಾಲಿ, ನಮ್ರತಾ, ವರ್ತೂರು, ಸಿರಿ, ಆಟ ಆಡಿದ್ರೆ, ಮೈಕಲ್ ಟೀಮ್ನಲ್ಲಿ ತನಿಷಾ, ವಿನಯ್, ಸ್ನೇಹಿತ್, ಸಂಗೀತಾ, ಅವಿನಾಶ್ ಶೆಟ್ಟಿ ತಂಡವಾಗಿ ರೂಪುಗೊಂಡಿದ್ದಾರೆ. ಎರಡು ತಂಡ ಟಾಸ್ಕ್ವೊಂದರಲ್ಲಿ ಆಟ ಆಡುವಾಗ ತನಿಷಾ ಕಾಲಿಗೆ ಪೆಟ್ಟಾಗಿದ್ದು, ತುಂಬಾ ನೋವಿನಿಂದ ಒದ್ದಾಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗೆ ಕಳುಹಿಸಲಾಗಿದೆ.
ಬಿಗ್ ಬಾಸ್ ಟೀಮ್ ಕಡೆಯಿಂದ ಬಂದು ತನಿಷಾ ಅವರನ್ನು ಚಿಕಿತ್ಸೆಗಾಗಿ ಹೊರ ಕರೆದುಕೊಂಡು ಹೋಗಿದ್ದಾರೆ. ಸಣ್ಣ ಪುಟ್ಟ ಏಟಾಗಿದ್ದರೆ ಆದಷ್ಟು ಬೇಗ ಬಿಗ್ ಬಾಸ್ಗೆ ಬರಲಿದ್ದಾರೆ. ಹೆಚ್ಚಿನ ಚಿಕಿತ್ಸೆ ಬೇಕಿದ್ರೆ ಮತ್ತೆ ಬಿಗ್ ಬಾಸ್ಗೆ ಬರೋದು ಅನುಮಾನವೇ ಸರಿ ಎಂದು ಹೇಳಲಾಗುತ್ತಿದೆ.
ದೊಡ್ಮನೆಗೆ ಕಾಲಿಟ್ಟ ಮೊದಲ ದಿನದಿಂದಲೂ ಗಟ್ಟಿ ಸ್ಪರ್ಧಿಯಾಗಿ ತನಿಷಾ ಸೆಡ್ಡು ಹೊಡೆದಿದ್ದಾರೆ. ಎದುರಾಳಿಗೆ ಮಸ್ತ್ ಠಕ್ಕರ್ ಕೊಟ್ಟಿದ್ದಾರೆ. ಸದ್ಯ ತನಿಷಾ ಮನೆಯಿಂದ ಹೊರಹೋಗಿರೋದು ಬಿಗ್ ಬಾಸ್ ಮನೆಮಂದಿಗೂ ಬೇಸರ ಮೂಡಿಸಿದೆ. ತಮ್ಮ ನೆಚ್ಚಿನ ನಟಿಯು ಬೇಗ ಗುಣಮುಖರಾಗಿ ಮತ್ತೆ ಬಿಗ್ ಬಾಸ್ ಮನೆಗೆ ಬರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.