ಗದಗ ; ನಗರದ ಜನರೇ ಎಚ್ಚರ ಎಚ್ಚರ, ನೀವು ಸ್ವಲ್ಪ ಯಾಮಾರಿದ್ರೆ ಸಾಕು ಅಪಾಯ ಕಟ್ಟಿಟ್ಟ ಬುತ್ತಿ. ನಿಮಗೆ ಅಪಾಯ ತಂದೊಡ್ಡಲು ಕಾದು ಕುಳಿತಿದೆ ಯುಜಿಡಿ ಮ್ಯಾನ್ ಹೋಲ್. ಎಚ್ಚರ ತಪ್ಪಿ ವಾಹನ ಚಲಾಯಿಸಿದ್ರೆ ಅಪಘಾತ ಫಿಕ್ಸ್.
ಹೌದು, ಗದಗ ನಗರದಲ್ಲಿನ ಶಿವಾನಂದ ಮಠದ ಎದುರಿನ ರಸ್ತೆಯಲ್ಲಿ ಈ ಮ್ಯಾನ್ ಹೋಲ್ ಇದ್ದು, ಮ್ಯಾನ್ ಹೋಲ್’ಗೆ ಮುಚ್ಚಳಿಕೆ ಹಾಕದೇ ಹಾಗೆ ಬಿಟ್ಟದ್ದಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ರಸ್ತೆಯಲ್ಲಿ ಓಡಾಡೋರ ಪ್ರಾಣಕ್ಕೆ ಸಂಚಕಾರ ತರಬೇಡಿ ಎಂದು ಇಲ್ಲಿನ ಜನ ಹೇಳುತ್ತಿದ್ದು, ನಮ್ಮ ಮನವಿಗೆ ಸ್ಪಂದಿಸಲೇಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ವಾರ್ಡ್ ಮೇಂಬರ್ ಸೇರಿ
ಗದಗ-ಬೇಟಗೇರಿ ನಗರಸಭೆ ಅಧಿಕಾರಿಗಳೇ ಈ ಸಮಸ್ಯೆಯತ್ತ ಗಮನಿಸಿ. ದೊಡ್ಡ-ದೊಡ್ಡ ಕಾರ್’ಗಳಲ್ಲಿ ಇದೇ ರಸ್ತೆಯಲ್ಲಿ ಓಡಾಡುವ ನಿಮಗೆ ಈ ಸಮಸ್ಯೆ ಕಾಣೋದೇ ಇಲ್ವಾ ಎಂದು ಸ್ಥಳೀಯರು ಪ್ರಶ್ನೆ ಮಾಡುತ್ತಿದ್ದಾರೆ.
ಹೀಗಾಗಿ ಸ್ಥಳೀಯ ಜನರ ಮನವಿಗೆ ಈಗಲಾದರೂ ಅಧಿಕಾರಿಗಳು ಸ್ಪಂದಿಸ್ತಾರಾ ಎಂಬುವುದನ್ನು ಕಾದು ನೋಡಬೇಕಾಗಿದೆ.
