ವೈಟ್ ಫೀಲ್ಡ್ ಠಾಣೆಯ ಎಎಸ್ಐ ದೇವರಾಜ್ ಅವರು ಬಾಬು ಎಂಬುವರಿಂದ ಹತ್ತು ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾನೆ.
ನಿನ್ನೆ ಮಂಗಳವಾರ ಎಸಿಬಿ ತನಿಖಾಧಿಕಾರಿಗಳು ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಾಗ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಬೆಂಗಳೂರು ನಗರ ಎಸಿಬಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

ಈ ಆರೋಪಿ ದೇವರಾಜ್ ನ ಕಣ್ಣು ಸಿಮೆಂಟ್ ಮತ್ತು ಸ್ಟೀಲ್ ಅಂಗಡಿ ಮಾಲೀಕರ ಮೇಲೆ ಬಿದ್ದು ಸುಖಾ ಸುಮ್ಮನೆ ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳನ್ನು ಠಾಣೆಗೆ ಕರೆತಂದು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ಹಣ ನೀಡದಿದ್ದರೆ ಕಳ್ಳ ಸಾಗಾಣಿಕೆ ಮಾಡುತ್ತಿದ್ದರು ಎಂದು ಕೇಸು ದಾಖಲು ಮಾಡುವುದಾಗಿ ಎದರಿಸಿ ಹಣ ವಸೂಲಿ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಅದೇ ರೀತಿ ದೂರಿದಾರ ಬಾಬು ಅವರು ಸ್ಟೀಲ್ ವ್ಯಾಪಾರ ಮತ್ತು ಸ್ಟೀಲ್ ಸರಬರಾಜು ಮಾಡುವ ವಾಹನಗಳನ್ನು ಹೊಂದಿದ್ದರು.ಇವರಿಂದಲೂ ಸಾಕಷ್ಟು ಬಾರಿ ವಸೂಲಿ ಮಾಡಿದ್ದಾನೆ.ಬ್ಯಾಂಕ್ ಲೋನ್ ಕಟ್ಟಲು ಹಣ ಬೇಕು 50 ಸಾವಿರ ಕೊಡು ಎಂದು ಹಾಗಾಗೆ ಕಾಲ್ ಮಾಡಿ ಹಿಂಸೆ ಕೊಡುತ್ತಿದ್ದನ್ನ ತಡೆಯದೆ ಎಸಿಬಿ ಮೊರೆ ಹೊಗಿ ಇಂದು ಟ್ರ್ಯಾಪ್ ಮಾಡಿಸಿ ಬೆಲೆಗೆ ಬೀಳಿಸಿದ್ದಾರೆ ಎಂದು ಆಟಿಐ ಕಾರ್ಯಕರ್ತ ಬೆಳತ್ತೂರು ಪರಮೇಶ್ ತಿಳಿಸಿದರು.
ಕಳೆದ ಏಳು ಎಂಟು ವರ್ಷಗಳಿಂದ ಹಣ ವಸೂಲಿ ಮಾಡಿ ಎರಡು ಎಕ್ಕರೆ ಜಮೀನು ಖರೀದಿ ಮಾಡಿದ್ದಾನೆ ಮತ್ತು ಬಗಲುಗುಂಟೆ ವ್ಯಾಪ್ತಿಯಲ್ಲಿ ನಾಲ್ಕು ಸೈಟ್ ಖರೀದಿ.ತೊಂಡೆ ಕೊಪ್ಪದಲ್ಲಿ ಐಶಾರಾಮಿ ಬಂಗಲೆ ಕಟ್ಟಿದ್ದಾನೆ ಎಂದು ಆರೋಪಿಸಿದರು.
ಡಿಸಿಪಿ ಕಛೇರಿ ಕೆಳಗೆ ಇರುವ ಠಾಣೆಯಲ್ಲಿ ಇಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಇನ್ನೂ ಬೆರೆ ಕಡೆ ಯಾವ ರೀತಿ ಭ್ರಷ್ಟಾಚಾರ ನಡೆಯಬಹುದು ಎಂದರು ನಂತರ ಸದ್ಯದಲ್ಲೆ ಒಬ್ಬ ಅಧಿಕಾರಿಯ ಬಣ್ಣ ಬಯಲು ಮಾಡುವುದಾಗಿ ತಿಳಿಸಿದರು.
